ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಾನು ಪ್ರತಿ ಬಾರಿ ಕಲಬುರಗಿಗೆ ಭೇಟಿ ನೀಡಿದಾಗ ದಲಿತರನ್ನು ಸೋಲಿಸಿದ್ದೀರಿ ಎಂಬ ಖರ್ಗೆ ಅವರು ಈಗ ಅಲ್ಲಿ ಆಗಿರುವ ಕೆಲಸವನ್ನು ನೋಡಿ ಮಾತನಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ #PMNarendraModi ನಗುತ್ತಲೇ ನೀಡಿದ ತಿರುಗೇಟಿಗೆ ಮಲ್ಲಿಕಾರ್ಜುನ ಖರ್ಗೆ #MallikarjunaKharge ಮೌನಕ್ಕೆ ಜಾರಿಗೆ ಘಟನೆ ನಡೆದಿದೆ.
ರಾಜ್ಯಸಭೆಯಲ್ಲಿ #Rajyasabha ಮಾತನಾಡಿದ ಪ್ರಧಾನಿ ಮೋದಿ, ಪ್ರತಿ ಬಾರಿ ತಾನು ಕಲಬುರಗಿಗೆ ಭೇಟಿ ನೀಡಿದಾಗ ದಲಿತನನ್ನು ಸೋಲಿಸಲಾಗಿದೆ ಎಂದು ಖರ್ಗೆ ಆರೋಪ ಮಾಡುತ್ತಾರೆ. ಖರ್ಗೆ ಅವರು ಕಲಬುರಗಿಯಲ್ಲಿ ಆಗಿರುವ ಕೆಲಸವನ್ನು ನೋಡಬೇಕು. ಕರ್ನಾಟಕದಲ್ಲಿ 1.70 ಕೋಟಿ ಜನ್ ಧನ್ #Jandhan ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ಕಲಬುರಗಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಎಷ್ಟೋ ಜನರು ಖಾತೆ ತೆರೆಯುತ್ತಿರುವಾಗ ಯಾರದ್ದೋ ಒಬ್ಬರದ್ದು ಖಾತೆ ಮುಚ್ಚುತ್ತಿದೆ. ನನಗೆ ನೋವು ಅರ್ಥವಾಗುತ್ತದೆ ಎಂದು ನಗುತ್ತಲೇ ಕಾಲೆಳೆದ ರೀತಿಗೆ ಖರ್ಗೆ ಪ್ರತಿಕ್ರಿಯೆ ನೀಡಲು ಸಹ ಅಶಸ್ತ ಸ್ಥಿತಿಯಲ್ಲಿ ಕುಳಿತಿದ್ದರು.
ದಲಿತರನ್ನು ಸೋಲಿಸಿದ್ದೀರಿ ಎಂದು ಖರ್ಗೆ ಅಳುತ್ತಾರೆ. ಆದರೆ ಅಲ್ಲಿಯ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ. ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿದ್ದು, ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ನಾವು ಶಾಶ್ವತ ಪರಿಹಾರಗಳತ್ತ ಸಾಗುತ್ತಿದ್ದು, ವಿಷಯಗಳನ್ನು ಎತ್ತಿಕೊಂಡು ಸಮಸ್ಯೆಗಳನ್ನು ಸೃಷ್ಟಿಸಿದ ನಂತರ ನಾವು ಓಡಿಹೋಗುವುದಿಲ್ಲ. ನಾವು ದೇಶದ ಪ್ರಮುಖ ಅಗತ್ಯಗಳ ಮೇಲೆ ಗಮನ ಹರಿಸಿ, ಪರಿಹಾರಗಳನ್ನು ಹುಡುಕುತ್ತೇವೆ ಎಂದು ತಿರುಗೇಟು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post