Read - < 1 minute
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರೈಲ್ವೆ ಇಲಾಖೆಯ ಸುಮಾರು 11 ಲಕ್ಷ ಸಿಬ್ಬಂದಿಗಳಿಗೆ ಬಂಪರ್ ಬಹುಮಾನ ಘೋಷಿಸಿರುವ ಕೇಂದ್ರ ಸರ್ಕಾರ 78 ದಿನಗಳ ವೇತನದ ಬೋನಸ್ ನೀಡಲು ನಿರ್ಧರಿಸಿದೆ.
ಈ ಕುರಿತಂತೆ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಈ ನಿರ್ಧಾರದಿಂದಾಗಿ 2024 ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ಕೇಂದ್ರದ ಮೇಲೆ ಬೀಳಲಿದೆ ಎಂದಿದ್ದಾರೆ.
Discussion about this post