ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಡಿಯ ದೇಶದಲ್ಲೇ ಸುದ್ದಿಯಾದ ಹುಣಸೋಡು ಭಾರೀ ಸ್ಫೋಟದ ಬೆನ್ನಲ್ಲೇ ಇದೇ ಪ್ರದೇಶದಲ್ಲಿ ಸುಮಾರು 63ಕ್ಕೂ ಅಧಿಕ ಸಜೀವ ಡಿಟೋನೇಟರ್ ಹಾಗೂ 4 ಜಿಲೆಟಿನ್ ಪೇಸ್ಟ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದ ಬಳಿಯ ಕ್ರಷರ್’ನಲ್ಲಿ ಮೊನ್ನೆಯಷ್ಟೇ ಭಾರೀ ಸ್ಪೋಟ ಸಂಭವಿಸಿತ್ತು. ಇದೇ ಸ್ಥಳದಲ್ಲಿ 63 ಸಜೀವ ಡಿಟೋನೇಟರ್ ಮತ್ತು 4 ಸಜೀವ ಜೆಲೆಟಿನ್ ಪೇಸ್ಟ್ ಪತ್ತೆಯಾಗಿದೆ.ಘಟನೆ ನಡೆದ ಮರುದಿನ ಬಂದ ಬಿಡಿಎಎಸ್ ತಂಡದ ತಜ್ಞರು ನಡೆಸಿದ ಸ್ಥಳ ಪರಿಶೀಲನೆ ವೇಳೆ ಡಿಟೋನೇಟರ್ ಮತ್ತು ಜೆಲೆಟಿನ್ ಪೇಸ್ಟ್ ಪತ್ತೆಯಾಗಿದ್ದು, ಘಟನೆ ನಡೆದ ಸುಮಾರು 200 ಮೀಟರ್ ದೂರದಲ್ಲಿ ಪತ್ತೆಯಾದ ಸಜೀವ ಸ್ಫೋಟಕಗಳು ದೊರೆತಿವೆ.
ಕ್ರಷರ್ ಕಟ್ಟಡದ ಕೆಳಭಾಗದಲ್ಲಿ ಈ ಸ್ಫೋಟಕಗಳನ್ನು ಕವರ್’ನಲ್ಲಿ ಸಂಗ್ರಹಿಸಿ ಇರಿಸಲಾಗಿತ್ತು. ಸ್ಫೋಟಕದ ಮೇಲೆ ಯಾವುದೇ ಕಂಪನಿ ಅಥವಾ ತಯಾರಕರ ಹೆಸರಿಲ್ಲ. ಮೂಲಗಳ ಪ್ರಕಾರ ಸ್ಫೋಟಕವನ್ನು ಹೊರಗೆ ತಯಾರಿಸಿ ತಂದಿಟ್ಟಿರುವ ಶಂಕೆಯಿದ್ದು, ತಜ್ಞರ ಪ್ರಕಾರ ಇದು ಹಿಂದೆಯೇ ಶೇಖರಿಸಿ ಇರಿಸಲಾಗಿದೆ ಎನ್ನಲಾಗಿದೆ.
ಸದ್ಯ ಇದನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರಿಸಲಾಗಿದ್ದು, ಕೋರ್ಟ್ ಅನುಮತಿ ಪಡೆದ ನಂತರ ಭದ್ರಾವತಿ ತಾಲೂಕಿನ ಬಂಡಿಗುಡ್ಡ ಬಳಿಯ ವಿಐಎಸ್’ಎಲ್ ಕಾರ್ಖಾನೆಗೆ ಸೇರಿದ ಮ್ಯಾಗಜೀನ್ ಎಂದು ಹೇಳಲಾಗಿದೆ.
ಕೋರ್ಟ್ ಅನುಮತಿ ಪಡೆದ ನಂತರ ಬಿಡಿಡಿಎಸ್ ತಂಡದ ತಜ್ಞರು ಸಮ್ಮುಖದಲ್ಲಿ ನಡೆಯಲಿರುವ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಕಾರ್ಯ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post