ಕಲ್ಪ ಮೀಡಿಯಾ ಹೌಸ್ | ಪಾಲ್ನಾಡು |
ನಿಂತಿದ್ದ ಲಾರಿಗೆ ಮಿನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಲ್ನಾಡು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ.

ರೆಂಟಚಿಂತಲದಿಂದ ಕನಿಷ್ಠ 35 ಮಂದಿ ಪ್ರಯಾಣಿಕರು ಮಿನಿ ವ್ಯಾನ್’ನಲ್ಲಿ ಶ್ರೀಶೈಲಂಗೆ ಯಾತ್ರೆ ಹೊರಟಿದ್ದರು. ರೆಂಟಚಿಂತಲ ಹತ್ತಿರ ಬರುವಾಗ ಮಿನಿ ವ್ಯಾನ್ ನಿಂತಿದ್ದ ಸ್ಟೇಷನರಿ ಲಾರಿಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಏಳು ಮಂದಿ ಮೃತಪಟ್ಟಿದ್ದು, 11 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
Also read: ನನ್ನ ಕನ್ನಡ ಧರ್ಮ ರಾಷ್ಟ್ರಕ್ಕೆ ಮುಟ್ಟಿಸುವೆ: ರಾಜ್ಯಸಭಾ ಬಿಜೆಪಿ ಅಭ್ಯರ್ಥಿ, ನಟ ಜಗ್ಗೇಶ್


ಅಪಘಾತಕ್ಕೆ ಮಿನಿ ವ್ಯಾನ್ ಅತಿವೇಗದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















