ಹೊಸಕೋಟೆ: ಉಡುಪಿ ಪೇಜಾವರ ಮಠದ ಶ್ರೀಗಳಿಗೆ ಭದ್ರತಾ ಕಾರ್ಯದಲ್ಲಿದ್ದ ಬೆಂಗಾವಲು ವಾಹನ ಹಾಗೂ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ದಂಪತಿ ಮೃತರಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸನಿಹ ಈ ಘಟನೆ ನಡೆದಿದ್ದು, ಚಿಂತಾಮಣಿ ಮೂಲಕ ರಾಮಕೃಷ್ಣಯ್ಯ(75) ಹಾಗೂ ಅವರ ಪತ್ನಿ ಸರ್ವಲೋಚನಾ(70) ಮೃತ ದುರ್ದೈವಿಗಳು.
ಚಿನ್ನಾಭರಣ ವ್ಯಾಪಾರಿಯಾಗಿರುವ ರಾಮಕೃಷ್ಣ ಅವರು ಕುಟುಂಬ ಸದಸ್ಯರ ಜೊತೆ ಬೆಂಗಳೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಶ್ರೀಗಳ ಕಾರಿನ ಭದ್ರತೆಗಾಗಿ ಹಿಂಬಾಲಿಸುತ್ತಿದ್ದ ಹೈವೇ ಪ್ಯಾಟ್ರೋಲಿಂಗ್ ವಾಹನ ಇಂಡಿಗೋ ಕಾರಿಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದ್ದು, ದಂಪತಿ ಮೃತರಾಗಿದ್ದಾರೆ. ರಾಮಕೃಷ್ಣಯ್ಯ ಅವರ ಸೊಸೆ ಹಾಗೂ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ ತಾಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ನಡೆಯುತ್ತಿರುವ ಕಾನ್ವ ಸಮ್ಮೇಳನದಲ್ಲಿ ಭಾಗವಹಿಸಿಲು ಪೇಜಾವರ ಶ್ರೀಗಳು ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ತೆರಳುತ್ತಿದ್ದರು.
ಘಟನೆ ಕುರಿತಂತೆ ಮಾತನಾಡಿರುವ ಶ್ರೀಗಳು, ಇದೊಂದು ನಡೆಯಬಾರದಿದ್ದ ದುರಂತ ಘಟನೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
Remembering Freedom Fighters Is the Duty of Every Indian: MP B.Y. Raghavendra
Kalpa Media House | SHIKARIPURA | Remembering the freedom fighters who fought against British rule, made immense sacrifices and secured...
Read moreDetails






