ವಂಶಾಡಳಿತದ ಪಾಪದ ಪಿಂಡವಾಗಿ ಭಾರತ ಮಾತೆಯ ಮುಕುಟ ಜಮ್ಮು ಕಾಶ್ಮೀರವನ್ನು ದಶಕಗಳ ಕಾಲ ಕತ್ತಲಲ್ಲಿಟ್ಟ ಕೃತ್ಯಕ್ಕೆ ಕೊನೆಗೂ ಅಂತ್ಯವಾಗಿದೆ.
ತಾಯಿ ಭಾರತಿಯ ಪ್ರಧಾನ ಸೇವಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಚಾಣಾಕ್ಷತನದಿಂದ ಜಮ್ಮು ಕಾಶ್ಮೀರದ ನರಕಕ್ಕೆ ಮುಕ್ತಿ ದೊರೆತಿದ್ದು, ಇನ್ನು ಕೇಂದ್ರಾಡಳಿತ ಪ್ರದೇಶವಾಗಿದೆ.
ಈ ನಿರ್ಧಾರ ದೇಶವಾಸಿಗಳಾಗಿಯೂ ದೇಶದ್ರೋಹದ ಚಿಂತನೆ ಹಾಗೂ ಮಾತನ್ನಾಡುವ ಗಂಜಿ ಗಿರಾಕಿಗಳು ಮಾತ್ರವಲ್ಲದೇ, ಅವಸಾನದ ಅಂಚಿಗೆ ತಲುಪುತ್ತಿರುವ ಕಾಂಗ್ರೆಸ್ಸನ್ನೂ ಸಹ ಕೆರಳಿಸಿದೆ.
ಇಂತಹ ವೇಳೆಯಲ್ಲಿಯೇ ಕಣಿವೆ ರಾಜ್ಯ ಮೇಲೆ ಹೇಗಾದರೂ ಮಾಡಿ ಹಿಡಿತ ಸಾಧಿಸಿ, ತಮ್ಮ ವಶಕ್ಕೆ ಪಡೆಯಬೇಕು ಎಂಬ ಹುನ್ನಾರದ ಕುತಂತ್ರಗಳನ್ನು ನಿರಂತರವಾಗಿ ಮಾಡುತ್ತಲೇ ಅದರಲ್ಲಿ ಪಾಕಿಸ್ಥಾನ ವಿಫಲವಾಗುತ್ತಲೇ ಇದೆ.
ಮೋದಿ ಸರ್ಕಾರದ ನಿರ್ಧಾರ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಮೇಲೆ ಇನ್ನೆಂದೂ ಶಾಶ್ವತವಾಗಿ ತಲೆ ಹಾಕಿ ಮಲಗಲೂ ಸಹ ಸಾಧ್ಯವಿಲ್ಲ ಎಂಬ ವಿಚಾರದ ಪಾಕಿಸ್ಥಾನವನ್ನು ಕೆರಳಿಸಿದೆ. ಇದಕ್ಕಾಗಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ಥಾನ ಹಾಗೂ ಕೃಪಾಪೋಷಿತ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತವೂ ಸಹ ಸಜ್ಜಾಗಿದೆ.
ಈ ಬೆಳವಣಿಗೆಗಳು ನಡುವೆಯೇ ಉಗ್ರರನ್ನು ಮಟ್ಟ ಹಾಕುವ ವಿಚಾರದಲ್ಲಿ ಜಾಗತಿಕ ಒತ್ತಡವನ್ನು ಎದುರಿಸುತ್ತಲೇ, ಉಗ್ರರ ಬೆದರಿಕೆಗಳ ನಡುವೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಈ ಹಿನ್ನೆಲೆಯಲ್ಲಿ ಜಾತಕ ಹಾಗೂ ಜ್ಯೋತಿಷ್ಯದ ಆಧಾರದಲ್ಲಿ ಇಮ್ರಾನ್ ಖಾನ್ ಅವರ ನಡೆ ಏನಿರಬಹುದು ಹಾಗೂ ಪಾಕ್ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ವಿಚಾರವನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರೊಂದಿಗೆ ಚರ್ಚಿಸಿದಾಗ ಅವರು ಹೇಳಿದ್ದಿಷ್ಟು.
ಎಡವಟ್ಟು ಖಾನ್
ಇಮ್ರಾನ್ ಖಾನನ ಜಾತಕದಲ್ಲಿ ಬಲಿಷ್ಟ ಕನ್ಯಾ ಶನಿ. ಮೋದಿಯವರ ಜಾತಕದಷ್ಟೇ ಬಲಿಷ್ಟ ಶನಿ ಇವನಿಗಿದೆ. ಚಾಪೆಯಡಿ ಬಂದರೆ ರಂಗೋಲಿ ಕೆಳಗೆ ಜಾರಿ ತಪ್ಪಿಸಿಕೊಳ್ಳುವ ಜಾಯ ಮಾನದವನೀತ. ಆದರೆ ಮೋದಿಯವರಷ್ಟೇ ನಿಪುಣನಾದರೂ ದೇವರ ದಯೆ ಮಾತ್ರ ಇವನಿಗಿಲ್ಲ. ಮೋದಿಯವರಿಗೆ ಪೂರ್ಣ ದೇವರ ದಯೆ ಇದೆ. ಇವನ ಕನ್ಯಾ ರಾಶಿಯ ಶನಿಗೆ, ಗೋಚರದಲ್ಲಿ ಧನು ರಾಶಿ ಶನಿಯು ಇವನ ಬುದ್ಧಿವಂತಿಕೆಗಳೇ ಮಾರಕವಾಗುತ್ತದೆ.
ಅಲ್ಲದೆ ಇವನ ಕುಂಭ ರಾಶಿಗೆ ಶನಿಯು ಲಾಭ ತರುವಂತದ್ದು ಆದರೂ ಈ ಲಾಭವೇ ಮಾರಕವಾಗುತ್ತದೆ. ಇಂತಹ ಗೋಚರದ ಫಲದಲ್ಲಿ ನಿಶ್ಚಿತವಾಗಿ 2020 ಜನವರಿಯ ಒಳಗೆ ಇವ ಎಡವಟ್ಟು ಮಾಡಿಕೊಳ್ಳುವುದು ಖಂಡಿತ. ಇದರ ಪರಿಣಾಮ ಒಂದೋ ಅಧಿಕಾರದಿಂದ ತಾನಾಗಿಯೇ ಇಳಿಯೋದು ಅಥವಾ ಇಳಿಸೋದು. ಅಲ್ಪ ಬಲದ ಸರಕಾರ ಪಥನವಾಗಿ ಮತ್ತೆ ಮಿಲಿಟರಿ ಆಡಳಿತ ಬಂದು ಭಯೋತ್ಪಾದಕರಿಗೆ ಅನುಕೂಲ ಆಗುತ್ತದೆ. ಅಂತೂ ಮಿಲಿಟರಿ ಮತ್ತು ಭಯೋತ್ಪಾದಕರಿಂದಾಗಿ ಪಾಕ್ ನಾಶವಾಗುತ್ತದೆ.
Discussion about this post