ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರಾಚಿ: 91 ಪ್ರಯಾಣಿಕರನ್ನು ಹೊತ್ತಿದ್ದ ಪಾಕಿಸ್ಥಾನ ಏರ್’ಲೈನ್ಸ್’ಗೆ ಸೇರಿದ ವಿಮಾನವೊಂದು ಕರಾಚಿ ಜನವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಜನರ ಕಣ್ಣೆದುರೇ ಏರ್ ಬಸ್ ಧಗಧಗನೆ ಹೊತ್ತಿ ಉರಿದಿದೆ.
ಎ-320 ವಿಮಾನ ಲ್ಯಾಂಡ್ ಆಗುವ ಒಂದು ನಿಮಿಷದ ಮೊದಲು ಈ ದುರಂತ ಸಂಭವಿಸಿರುವುದಾಗಿ ವರದಿ ತಿಳಿಸಿದೆ. ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ವಿಮಾನ ಮನೆಗಳ ಮೇಲೆ ಬಿದ್ದಿರುವುದರಿಂದ 8 ರಿಂದ 10 ಮನೆಗಳು ಜಖಂಗೊಂಡಿದೆ.
ಸಮೀಪದ ಮನೆಗಳಿಗೆ ಬೆಂಕಿಹೊತ್ತಿಕೊಂಡಿರುವ ಫೂಟೇಜ್ ಅನ್ನು ಪಾಕ್ ಮಾಧ್ಯಮಗಳು ಬಿತ್ತರಿಸುತ್ತಿರುವುದಾಗಿ ವರದಿ ವಿವರಿಸಿದೆ.
Get in Touch With Us info@kalpa.news Whatsapp: 9481252093
Discussion about this post