ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಮತ್ತು ನಾಗನಹಳ್ಳಿ ನಡುವೆ ನಡೆಯುತ್ತಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವು ರೈಲು ಸೇವೆಗಳಲ್ಲಿ ಕೆಳಕಂಡ ಬದಲಾವಣೆಗಳನ್ನು ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದ ವಿವರಗಳು ಹೀಗಿವೆ.
ಈ ರೈಲುಗಳ ಭಾಗಶಃ ರದ್ದತಿ
1. 21.03.2026, 25.03.2026, 10.04.2026 ಮತ್ತು 15.04.2026 ರಂದು ಹೊರಡುವ 66579 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮು ರೈಲು ಪಾಂಡವಪುರ #Pandavapura ಮತ್ತು ಅಶೋಕಪುರಂ ನಡುವೆ ಭಾಗಶಃ ರದ್ದುಗೊಳ್ಳಲಿದ್ದು ಪಾಂಡವಪುರದವರೆಗೆ ಮಾತ್ರ ಸಂಚರಿಸಲಿದೆ.
2. 21.03.2026, 25.03.2026, 10.04.2026 ಮತ್ತು 15.04.2026 ರಂದು ಹೊರಡುವ ರೈಲು ಸಂಖ್ಯೆ 66554 ಅಶೋಕಪುರಂ – ಕೆಎಸ್’ಆರ್ ಬೆಂಗಳೂರು ಮೆಮು ರೈಲು #MemuTrain ಅಶೋಕಪುರಂ ಮತ್ತು ಪಾಂಡವಪುರ ನಡುವೆ ಭಾಗಶಃ ರದ್ದುಗೊಳ್ಳಲಿದ್ದು ಈ ರೈಲು ಅಶೋಕಪುರಂ ಬದಲು ಪಾಂಡವಪುರದಿಂದ ನಿಗದಿತ ಸಮಯಕ್ಕೆ ಹೊರಡಲಿದೆ.
ಈ ರೈಲುಗಳ ನಿಯಂತ್ರಣ
1. 20.03.2026, 24.03.2026, 09.04.2026, 14.04.2026 ರಂದು ಹೊರಡುವ 16586 ಸಂಖ್ಯೆಯ ಮುರ್ಡೇಶ್ವರ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಈ ರೈಲಿನ ಸಮಯ ಬದಲಾವಣೆ
1. 20.03.2026, 24.03.2026, 09.04.2026 ಮತ್ತು 14.04.2026 ರಂದು ಹೊರಡುವ 06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲು ಎಸ್’ಎಂವಿಟಿ ಬೆಂಗಳೂರು ನಿಲ್ದಾಣದಿಂದ 100 ನಿಮಿಷ ತಡವಾಗಿ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















