ಕಲ್ಪ ಮೀಡಿಯಾ ಹೌಸ್ | ಪಟ್ಟಣಂತಿಟ್ಟ |
ಶಬರಿಮಲೆ ಯಾತ್ರಿಗಳಿದ್ದ ವಾಹನ ಉರುಳಿಬಿದ್ದು, ಎಂಟು ಜನ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳ-ತಮಿಳುನಾಡು ಗಡಿ ಭಾಗದ ಕುಮಿಲಿಯಲ್ಲಿ ನಡೆದಿದೆ.
ಶಬರಿಮಲೆಗೆ ಭೇಟಿ ನೀಡಿ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಯಾತ್ರಾರ್ಥಿಗಳು ತೇಣಿ ಅಂಡಿಪಟ್ಟಿ ಮೂಲದವರು ಎನ್ನಲಾಗಿದೆ.
ಭಾರೀ ವೇಗವಾಗಿ ಚಲಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post