ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮೇ 10ರಿಂದ 24ರವರೆಗೂ ಲಾಕ್ ಡೌನ್ ಘೋಷಣೆ ಮಾಡಿರುವ ಬೆನ್ನಲ್ಲೇ ಈ ಅವಧಿಯಲ್ಲಿ ಯಾವುದೇ ರೀತಿಯ ವಾಹನಗಳು ರಸ್ತೆಗೆ ಇಳಿಯಲು ಅವಕಾಶವಿಲ್ಲ ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, 14 ದಿನಗಳ ಕಾಲ ಆಸ್ಪತ್ರೆ, ಟ್ರೈನ್ ಹಾಗೂ ವಿಮಾನ ಸಂಚಾರ ಮಾಡುವವರು ತಲುಪಲು ಮಾತ್ರ ವಾಹನ ಬಳಸಬಹುದು. ಆದರೆ, ಅಗತ್ಯ ವಸ್ತು ಖರೀದಿಗೂ ಸಹ ವಾಹನಗಳನ್ನು ಬಳಸದೇ ನಡೆದುಕೊಂಡೇ ಹೋಗಬೇಕು ಎಂದರು.
ಇದೇ ವೇಳೆ ಬೆಂಗಳೂರಿನ ಕೆ.ಆರ್. ಮಾರ್ಕೆಟನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post