ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ಮಾಜಿ ನಟಿ ರಮ್ಯಾ ಈಗ ಮತ್ತೆ ಪ್ರಧಾನಿಯವರನ್ನು ಕೀಳುಮಟ್ಟದಲ್ಲಿ ಟೀಕಿಸಿದ್ದಾರೆ.
Is that bird dropping? pic.twitter.com/63xPuvfvW3
— Divya Spandana/Ramya (@divyaspandana) November 1, 2018
ನಿನ್ನೆ ಅಹ್ಮದಾಬಾದ್‌ನಲ್ಲಿ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಅವರ ಹೆಮ್ಮೆ ಪ್ರತಿಮೆಯ ಕಾಲ ಬುಡದಲ್ಲಿ ಪ್ರಧಾನಿ ಮೋದಿ ನಿಂತಿರುವ ಫೋಟೋ ಪ್ರಕಟವಾಗಿತ್ತು. ಈ ಫೋಟೋವನ್ನು ಶೇರ್ ಮಾಡಿರುವ ರಮ್ಯಾ, ಹಕ್ಕಿ ಹಿಕ್ಕಿ ಹಾಕಿದೆಯೇ ಎಂದು ಕೀಳುಮಟ್ಟದಲ್ಲಿ ಕುಹಕವಾಡಿದ್ದಾರೆ.
ರಮ್ಯಾ ಹಾಕಿರುವ ಈ ಸಾಲುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸಿದೆ ಎಂದು ಚಾಟಿ ಬೀಸಿದ್ದಾರೆ.
Ummm no, it is the values of the Congress that are dropping.
Historical disdain for Sardar Patel + Pathological dislike for @narendramodi = Such language.
Clearly, @RahulGandhi’s politics of 'love'! https://t.co/1TPCY7Fs4d
— BJP (@BJP4India) November 1, 2018
Discussion about this post