ಸಾಗರ: ಜಿಲ್ಲೆಯಲ್ಲಿ ಬದಲಾವಣೆ ಬಯಸಿರುವ ಮತದಾರರು ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಆವಿನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮೋದಿ ನೋಡಿ ಓಟು ಹಾಕಿ ಎನ್ನುತ್ತಾರೆ. ಕರ್ನಾಟಕದಲ್ಲಿ ಹಾಗಾದರೆ ಯಡಿಯೂರಪ್ಪ ಏನೂ ಮಾಡಿಲ್ಲ ಎಂದರ್ಥ. ಕಳೆದ ಚುನಾವಣೆಯಲ್ಲಿ ಅಪ್ಪ ಮಗ ಸುಳ್ಳು ಹೇಳಿಕೊಂಡ ಜಾತಿ ರಾಜಕಾರಣ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ಅರ್ಜಿ ಕೊಟ್ಟು ಅಭಿವೃದ್ಧಿಗೆ ಹಣ ತಂದರೆ ಇಲ್ಲಿನ ಶಾಸಕರು ಟೇಪ್ ಕಟ್ಟುಮಾಡುತ್ತಿದ್ದಾರೆ. ಹಾಲಪ್ಪ ಮರಳು ದಂಧೆಯಲ್ಲಿ ತೊಡಗಿದ್ದು, ಜನ ಬದಲಾವಣೆ ಬಯಸಿದ್ದಾರೆ.
ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ತಂದೆ ಇಲ್ಲದ ಸಮಯದಲ್ಲಿ ಕಾಗೋಡು ತಿಮ್ಮಪ್ಪ ನನ್ನ ಪರವಾಗಿ ನಿಂತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ 1650 ಕೋಟಿ ರೂ. ನೀಡಿದ್ದು ಸಮ್ಮಿಶ್ರ ಸರ್ಕಾರ, ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ಭೂಮಿ ಹಕ್ಕನ್ನು ಕೊಡಿಸಲು ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನೀವು ಮನೆ ಮನೆ ಭೇಟಿ ಮಾಡಿ ಮಧು ಬಂಗಾರಪ್ಪನಿಗೆ ಮತ ಕೇಳಿ, ಈ ಜಿಲ್ಲೆಯಲ್ಲಿ ಕಾಗೋಡು ತಮ್ಮಪ್ಪ ಹಾಗೂ ಬಂಗಾರಪ್ಪ ಹೆಸರೆ ನನಗೆ ಶ್ರೀರಕ್ಷೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಧುಬಂಗಾರಪ್ಪ ಪರ ಅಲೆಯಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ಖಾತ್ರಿಯ ಕೆಲಸದ ಅವಧಿ ಜಾಸ್ತಿ ಮಾಡಿ ದುಡಿಯುವ ಕೈಗೆ ಕೆಲಸ ಕೊಡುತ್ತೇವೆ. ದೇವರಾಜು ಅರಸು ಕಾಲದಲ್ಲಿ ಉಳುವವನಿಗೆ ಭೂಮಿ ಕೊಡಿಸದ ನೆಮ್ಮದಿಯಿದೆ, ಈ ಬಾರಿ ಭೂತ್ ಮಟ್ಟದಲ್ಲಿ ಶೇ.90ರಷ್ಟು ಮತ ಮಧುಗೆ ಕೊಟ್ಟು ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಸಾಮಾಜಿಕ ನ್ಯಾಯಕ್ಕಾಗಿ ನಾವು ಜೆಡಿಎಸ್ ಜೊತೆ ಕೈಜೊಡಿಸಿದ್ದೇವೆ, ಯಡಿಯೂರಪ್ಪ ಮಾಡಿದ ಕಾನೂನು ಬಗರ್ ಹುಕುಂ ರೈತರು ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದರು.
ಸಾಗರ ವಿಧಾನಸಭಾ ಕ್ಷೇತ್ರದ ತ್ಯಾಗರ್ತಿಯಲ್ಲಿ ಲೋಕಸಭಾ ಅಭ್ಯರ್ಥಿ ಮಾನ್ಯ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವರು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಚುನಾಯಿತ ಪ್ರತಿನಿಧಿಗಳ ಮುಖಂಡರ ಹಾಗೂ ಕಾರ್ಯಕರ್ತರ ಅಭಿಮಾನಿಗಳ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು
Discussion about this post