ಜಗತ್ತಿನ ಅನೇಕ ಕಲೆಗಳಲ್ಲಿ ನಾಟ್ಯ ಕೂಡ ಒಂದು. ನಾಟ್ಯ ಲೋಕದಲ್ಲಿ ಇಂದಿಗೂ ಜನಜನಿತವಿಗಿರುವ ಹೆಸರು ನಾಟ್ಯ ರಾಣಿ ಶಾಂಕುತಲೆ. ಈಕೆ ಹುಟ್ಟಿದ ಈ ನೆಲದಲ್ಲಿ ಅನೇಕ ನಾಟ್ಯಗಾರರು ಜನಿಸಿದ್ದಾರೆ. ಅಂತಹ ನಾಟ್ಯಗಾರರಲ್ಲಿ ಬಾಲ ಪ್ರತಿಭೆ ಕೃತಿ ಆರ್. ಸನ್ನಿಲ್ ಕೂಡ ಒಬ್ಬಳು. ಈ ಅಪ್ರತಿಮ ಪ್ರತಿಭೆಯನ್ನು ತುಳುಭಾಷೆಯಲ್ಲಿ ನಲಿಪುನ ಮೈರ್ ಬಿರುದುನಿಂದ ಕರೆಯುತ್ತಾರೆ. ಅಂದರೆ ಕನ್ನಡದಲ್ಲಿ ಕುಣಿಯುವ ನವಿಲು ಇದರ ಅರ್ಥ.
ನಾಟ್ಯದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಇವಳ ಕೇವಲ ನಾಲ್ಕನೆಯ ವಯಸ್ಸಿನಲ್ಲಿ ನೃತ್ಯ ವೃತ್ತಿ ಜೀವನ ಆರಂಭವಾಯಿತು. ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯಾದ ಇವರು ವಸಂತ ಮತ್ತು ಮಂಜಿತರ ಶಿಷ್ಯೆ.
ಇಲ್ಲಿಯ ತನಕ 1500ಕ್ಕೂ ಹೆಚ್ಚಿನ ನೃತ್ಯ ಪ್ರದರ್ಶನ ನೀಡಿರುವ ಈಕೆ ಈ ಟಿವಿ ಚಾನೆಲ್ (ತೆಲುಗು) ವತಿಯಿಂದ ಹೈದರಾಬಾದ್’ನಲ್ಲಿ ನಡೆದ ಡಿ ಜ್ಯೂನಿಯರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು 5000ಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳನ್ನು ಸೋಲಿಸಿ ಟಾಪ್ 12ರ ಪಟ್ಟಿಯಲ್ಲಿ ಹೆಸರು ಪಡೆಯುವಲ್ಲಿ ಯಶಸ್ಸು ಪಡೆದಿದ್ದಾಳೆ. ಅಲ್ಲದೆ ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಪುಟಾಣಿ ಪಂಟ್ರು ಸೀಸನ್-2ರಲ್ಲಿ ಭಾಗವಹಿಸಿದ್ದಾಳೆ. ಹ್ಯಾಪಿ ಉಡುಪಿ ಎಂಬ ಆಲ್ಬಮ್ ಹಾಡಿನಲ್ಲಿ ತನ್ನ ಅಭಿನಯಿಸಿದ್ದಾಳೆ.
ನಾಟ್ಯ ಮಯೂರಿ ಕೃತಿ ಆರ್. ಸನ್ನಿಲ್’ಗೆ ಅನೇಕ ಅರಸಿ ಬಂದ ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಕರ್ನಾಟಕ ಪ್ರತಿಭಾ ರತ್ನ ಪುರಸ್ಕಾರ, ಮಡಿಲು ಸನ್ಮಾನ ಪುರಸ್ಕಾರ ಆಮಂತ್ರಣ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿಗಳು ಬಂದಿವೆ. ಕೇವಲ ಕರ್ನಾಟಕದ ಉಡುಪಿ, ಶಿವಮೊಗ್ಗ, ಬೆಂಗಳೂರು, ಕುಮಟಾ, ಹೊನ್ನಾವರ, ಕುಂದಾಪುರ, ಹೆಬ್ರಿ, ಮೈಸೂರು, ತುಮಕೂರು, ಹಾಸನ, ಮೊದಲಾದ ಕಡೆ ನೃತ್ಯ ಪ್ರದರ್ಶನ ನೀಡಿದ್ದಾಳೆ.
ರಾಜ್ಯವಲ್ಲದೆ ತಮಿಳುನಾಡು, ಹೈದರಾಬಾದ್ ಸೇರಿದಂತೆ ಮೊದಲಾದ ಕಡೆ ನೃತ್ಯ ಪ್ರದರ್ಶನಗಳನ್ನು ಕೊಟ್ಟಿದ್ದಾಳೆ. ಅವಳ ನಾಟ್ಯ ಹೀಗೆ ಮುಂದುವರೆಯಲಿ. ನಾಟ್ಯ ಲೋಕದಲ್ಲಿ ತಾರೆಯಂತೆ ಮಿನುಗಲೆಂದು ತುಳುನಾಡಿನ ಆರಾಧ್ಯ ದೈವಗಳಾದ ಕೋಟಿ ಚೆನ್ನಯರಲ್ಲಿ ಪ್ರಾರ್ಥಿಸೋಣ.
ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post