ನವದೆಹಲಿ: ಮಕ್ಕಳನ್ನು ಅತೀವವಾಗಿ ಪ್ರೀತಿಸುವ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್’ನಲ್ಲಿ ವಿಶೇಷ ಪುಟಾಣಿ ಅತಿಥಿಯನ್ನು ಭೇಟಿಯಾಗಿ ಸಂಭ್ರಮಿಸಿದ್ದು, ಇದರ ಫೋಟೋ ಫುಲ್ ವೈರಲ್ ಆಗಿದೆ.
ಈ ಫೋಟೋವನ್ನು ತಮ್ಮ ಇನ್ಟ್ರ್ಸಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಧಾನಿಯವರು, ಸಂಸತ್ತಿನಲ್ಲಿ ಅತ್ಯಂತ ವಿಶೇಷ ಅತಿಥಿಯನ್ನು ಭೇಟಿ ಮಾಡಿದೆ ಎಂದು ಸಂಭ್ರಮಿಸಿದ್ದಾರೆ.
ಒಂದು ಮುದ್ದಾದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಆಸನದಲ್ಲಿ ಕುಳಿತು ಆಟವಾಡಿಸುತ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರು ಈ ಫೋಟೋಗಳನ್ನು ಶೇರ್ ಮಾಡಿದ ಕೇವಲ 30 ನಿಮಿಷಗಳಲ್ಲಿ 5 ಲಕ್ಷ ಮಂದಿ ಲೈಕ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Discussion about this post