ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ #Bengaluru ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಭಯೋತ್ಪಾದಕರನ್ನು #Suspected_Terrorist ಸಿಸಿಬಿ ಪೊಲೀಸರು #CCB ಬಂಧಿಸಿದ್ದು, ಅವರು ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.
ಬಂಧಿತ ಶಂಕಿತ ಭಯೋತ್ಪಾಕರು ಇವರು:
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸಂಚುಕೋರ ಶಂಕಿತ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣಗೆ ಒಳಪಡಿಸಲಾಗಿದೆ.
ಶಂಕಿತರು ಸಿಕ್ಕಿದ್ದೆಲ್ಲಿ?
ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಪೋಟಕ್ಕೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು. ಇದರ ಬೆನ್ನಲ್ಲೇ ಅಲರ್ಟ್ #Alert ಆದ ಪೊಲೀಸರು ಶಂಕಿತರ ಲೊಕೇಶನ್ ಟ್ರೇಸ್ ಮಾಡಿ ಬಲೆ ಬೀಸಿದ್ದರು.
ಮಾಹಿತಿ ಖಚಿತಗೊಂಡ ಹಿನ್ನೆಲೆಯಲ್ಲಿ ಕನಕನಗರದ ಸುಲ್ತಾನ್ ಪಾಳ್ಯದ ಮಸೀದಿ ಬಳಿಯಲ್ಲಿ ಶಂಕಿತರ ಮೀಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಎನ್ನುವವರನ್ನು ಬಂಧಿಸಲಾಗಿದೆ.
2017 ರಲ್ಲಿ ಆರ್’ಟಿ ನಗರದ ನೂರ್ ಕೊಲೆ ಕೇಸಿನಲ್ಲಿ ಬಂಧಿತರ ಪೈಕಿ ಐವರಿಗೆ ಟೆರರ್ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್’ಜಬ್ಬಾನಿಗೆ ಟೆರರ್ ಲಿಂಕ್ ಇದೆ ಎಂಬ ಆಕಂಕಕಾರಿ ಮಾಹಿತಿಯೂ ಸಹ ಹೊರಬಿದ್ದಿದೆ. ಅಲ್ಲದೇ ಇವರಿಗೆ 2008ರ ಬೆಂಗಳೂರು ಸೀರಿಯಲ್ ಬ್ಲಾಸ್ಟ್ ಕೇಸ್ #SerialBlast ರೂವಾರಿ ಜುನೈದ್ ಪರಿಚಯವಾಗಿದೆ ಎನ್ನಲಾಗಿದ್ದು, ಜುನೈದ್ ಮೂಲಕ ಸ್ಫೋಟಕ್ಕೆ ಈ ಐವರು ಸಂಚು ಹೂಡಿದ್ದಾರೆ ಎನ್ನಲಾಗಿದೆ.
ಏನೆಲ್ಲಾ ವಶಕ್ಕೆ ಪಡೆಯಲಾಗಿದೆ?
ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ #CentralIntelligenceAgency ಕಾರ್ಯಾಚರಣೆ ವೇಳೆ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್’ಗಳು, ಲ್ಯಾಪ್ ಟಾಪ್ ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post