ರಾವಲಕೋಟ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದಲ್ಲೇ ಸಾರ್ವಜನಿಕ ವೇದಿಕೆಯಲ್ಲಿ ಭೀಕರವಾಗಿ ಹತ್ಯೆ ಮಾಡಿ, ದೇಶವನ್ನು ಛಿದ್ರಗೊಳಿಸುತ್ತೇವೆ ಎಂದು ನಿಷೇಧಿತ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಾಗೂ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಹಿರಂಗವಾಗಿ ಹೇಳಿದ್ದಾನೆ.
ಈ ಕುರಿತಂತೆ ಎಎನ್‌ಐ ಸೇರಿದಂತೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪ್ರಧಾನಿ ಮೋದಿಯ ಹತ್ಯೆ ಮಾಡುತ್ತೇವೆ, ಭಾರತ ಹಾಗೂ ಇಸ್ರೇಲ್‌ಗಳಲ್ಲಿ ಅಶಾಂತಿ ಸೃಷ್ಠಿಸಿ ಛಿದ್ರಗೊಳಿಸುತ್ತೇವೆ. ಹತ್ಯಾಕಾಂಡಗಳು ಬಹಳಷ್ಟು ನಡೆಯಲಿವೆ. ಭಾರತ ಹಾಗೂ ಅಮೆರಿಕಾದಲ್ಲಿ ಇಸ್ಲಾಂ ಧ್ವಜ ರಾರಾಜಿಸಲಿದೆ ಎಂದು ದುರಹಂಕಾರದ ಮಾತುಗಳನ್ನಾಡಿದ್ದಾನೆ.
ರಂಜಾನ್ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪ್ರಾರ್ಥನೆ ವೇಳೆ ಮಾತನಾಡಿರುವ ಅವನು, ರಂಜಾನ್ ಮಾಸ ಪವಿತ್ರವಾದುದು, ಜಿಹಾದ್ ಹಾಗೂ ಹತ್ಯೆ ಮಾಡಲಿಕ್ಕೆ ಇದು ಪ್ರಶಸ್ತವಾದ ಮಾಸ. ಈ ಸಂದರ್ಭದಲ್ಲಿ ಜಿಹಾದ್ ಮಾಡುವವರು ಸ್ವರ್ಗ ಸೇರುತ್ತಾರೆ. ಇದಕ್ಕಾಗಿ ಅವರಿಗೆ ಈ ವೇಳೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದಿದ್ದಾನೆ.
ಜೆಯುಡಿ ಸದಸ್ಯರು ಕಾಶ್ಮೀರದಲ್ಲಿ ಜಿಹಾದ್ ನಡೆಸಲು ಹಾಗೂ ಭಾರತೀಯ ಸೇನೆಯೊಂದಿಗೆ ಸೆಣೆಸಲು ಸಿದ್ದವಾಗಿದೆ. ಭಾರತವನ್ನು ಛಿದ್ರ ಮಾಡಲು ಹಾಗೂ ಕಾಶ್ಮೀರವನ್ನು ಸ್ವತಂತ್ರ್ಯಗೊಳಿಸಲು ನಮ್ಮ ತಂಡ ಸಿದ್ದವಾಗಿ, ಕಾಯುತ್ತಾ ನಿಂತಿದೆ.. ಜಯ ಸಾಧಿಸಿ, ಜಿಹಾದ್ ಬಾವುಟವನ್ನು ಹಾರಿಸುತ್ತದೆ ಎಂಬ ದಾಷ್ಟ್ರ್ಯದ ಮಾತುಗಳನ್ನಾಡಿದ್ದಾನೆ.
ದಾನ ಮಾಡಲು ರಂಜಾನ್ ಮಾಸ ಶ್ರೇಷ್ಠವಾದುದು ಆಗಿದೆ. ಇದಕ್ಕಾಗಿ ಜುಯುಡಿ ಹಾಗೂ ಮುಜಾಹಿದ್ದೀನ್ ಸಂಘಟನೆಗಳಿಗೆ ದಾನ ಮಾಡಿ. ಜಿಹಾದ್‌ಗಾಗಿ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಬೆಂಬಲವಾಗಿ ಮಹಿಳೆಯರು ತಮ್ಮ ಗಂಡು ಮಕ್ಕಳನ್ನು ನಮಗೆ ನೀಡಿ. ಈ ಮೂಲಕ ಕಾಶ್ಮೀರದಲ್ಲಿ ಜಿಹಾದ್ ವಿಜೃಂಭಿಸಲು ಬೆಂಬಲಿಸಿ ಎಂದು ಪಾಕಿಸ್ಥಾನೀಯರಲ್ಲಿ ಕೇಳಿದ್ದಾನೆ.
ಅಮೆರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದ್ದ ಸುಮಾರು 2 ಬಿಲಿಯನ್ ಡಾಲರ್ ಮಿಲಿಟರಿ ಅನುದಾನ ನೀಡುತ್ತಿತ್ತು. ಆದರೆ, ಪಾಕ್ ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಅನುದಾನವನ್ನು ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಸ್ಥಗಿತಗೊಳಿಸಿದ್ದಾರೆ.
ಇನ್ನೊಂದೆಡೆ, ಇದೇ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿಯವರನ್ನುಹತ್ಯೆ ಮಾಡಲು ಐಎಸ್‌ಐಎಸ್ ರೂಪಿಸಿದ ಸಂಚನ್ನು ಗುಜರಾತ್ ಎಟಿಎಸ್ ವಿಫಲಗೊಳಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post