ಲಕ್ನೋ: ಹೌದು… ಅವರು ನಮ್ಮ ದೇಶದ ಹೆಮ್ಮೆಯ ಪ್ರಧಾನಿ… ವಿಶ್ವದ ಮುಂದೆ ಭಾರತೀಯರು ಗರ್ವದಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ ನಾಯಕ… ಇಂತಹ ವ್ಯಕ್ತಿಯ ಒಂದು ಆಟೋಗ್ರಾಫ್ ಓರ್ವ ಮಹಿಳೆಯ ಜೀವನವನ್ನೇ ಬದಲಿಸಿದೆ.
ಜುಲೈ 16ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ್‌ನಲ್ಲಿ ಮೋದಿಯವರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆ ವೇಳೆ ಅಲ್ಲಿ ಹಾಕಲಾಗಿದ್ದ ಟೆಂಟ್‌ನ ಒಂದು ಭಾಗ ಕುಸಿದು ಬಿದ್ದು, ಹಲವರು ಗಾಯಗೊಂಡಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಪ್ರಧಾನಿಯವರ ಆದೇಶದಂತೆ ಸ್ವತಃ ಅವರ ವೈಯಕ್ತಿಕ ಭದ್ರತಾ ಪಡೆದ ಆಸ್ಪತ್ರೆಗೆ ದಾಖಲಿಸಿತ್ತು.
ಆ ರೀತಿಯ ಗಾಯಗೊಂಡಿದ್ದವರಲ್ಲಿ ಬಂಕುರಾ ನಿವಾಸಿ ರೀಟಾ ಮುಡಿ ಸಹ ಒಬ್ಬರು. ಗಾಯಾಳುಗಳನ್ನು ವಿಚಾರಿಸುವ ಸಲುವಾಗಿ ಭಾಷಣ ಮುಗಿಸಿಕೊಂಡು ಪ್ರಧಾನಿಯವರು ಸ್ವತಃ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ರೀಟಾ ಪ್ರಧಾನಿಯವರ ಆಟೋಗ್ರಾಫ್ ಪಡೆದಿದ್ದಾರೆ. ಈಗ ಈ ಆಟೋಗ್ರಾಫ್ ಆಕೆಯನ್ನು ಸೆಲೆಬ್ರಟಿಯನ್ನಾಗಿ ಮಾಡಿದೆ.
ಪ್ರಧಾನಿ ಮೋದಿಯವರ ಆಟೋಗ್ರಾಫ್ ನೋಡಲು ಆಕೆಯ ಮನೆಗೆ ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ.
ಅಲ್ಲದೇ, ಕಳೆದ ಹತ್ತು ದಿನಗಳಲ್ಲಿ ಆಕೆಗೆ ನೂರಾರು ಯುವಕರು ಮದುವೆ ಪ್ರಸಾಪವನ್ನು ನೀಡುತ್ತಿದ್ದು, ಇದರಲ್ಲಿ ಎರಡು ಪ್ರಸ್ತಾವನೆಗಳು ಅತ್ಯುತ್ತಮವಾದುದೂ ಸಹ ಆಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಕುರಿತಂತೆ ಮಾತನಾಡಿರುವ ರೀಟಾ, ಮೋದಿ ಜೀ ಅವರನ್ನು ಅಷ್ಟು ಹತ್ತಿರದಿಂದ ನೋಡಿದ್ದು ನಮ್ಮ ಭಾಗ್ಯ. ಅವರು ನೀಡಿದ ಆಟೋಗ್ರಾಫ್‌ನಿಂದ ನಾನು ಸೆಲೆಬ್ರಟಿ ಆಗಿದ್ದೇನೆ. ಈಗ ಸಾಕಷ್ಟ ಮದುವೆ ಪ್ರಸ್ತಾವನೆಗಳು ಬರುತ್ತಿವೆ. ಆದರೆ, ಸದ್ಯ ನಾನು ಓದುತ್ತಿದ್ದೇನೆ. ನನ್ನ ತಂದೆ ತಾಯಿ ಯಾವಾಗ ನಿರ್ಧರಿಸುತ್ತಾರೋ ಆಗ ವಿವಾಹವಾಗುತ್ತೇನೆ ಎಂದಿದ್ದಾರೆ.
Discussion about this post