ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಿಳೆ ಹಾಗೂ ಹೆಣ್ಣು ಮಗುವಿನ ಕಣ್ಣೀರು ಕಂಡು ಸಹಾಯ ಮಾಡಿದ್ದಕ್ಕೆ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದು, ಕಾನೂನು ರೀತಿಯಲ್ಲಿ ಎದುರಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #BSYediyurappa ಹೇಳಿದ್ದಾರೆ.
ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಪೋಕ್ಸೋ #POCSO ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಆಕೆಯನ್ನು ನಾನೇ ಕರೆದು ಕೂರಿಸಿಕೊಂಡು ಮಾತನಾಡಿ, ಸಮಸ್ಯೆ ಏನೆಂದು ಕೇಳಿದೆ. ತನಗೆ ಬಹಳ ಅನ್ಯಾಯವಾಗಿದೆ ಎಂದು ಕಣ್ಣೀರು ಹಾಕಿದ ಹಿನ್ನೆಲೆಯಲ್ಲಿ ನ್ಯಾಯ ಒದಗಿಸುವಂತೆ ಪೊಲೀಸ್ ಕಮಿಷನರ್ #Police ಅವರೊಂದಿಗೆ ಮಾತನಾಡಿ, ಅವರ ಬಳಿ ಕಳುಹಿಸಿದೆ. ಆದರೆ, ಆನಂತರ ಮಹಿಳೆ ನನ್ನ ವಿರುದ್ಧವೇ ಮಾತನಾಡಲು ಆರಂಭಿಸಿದರು ಎಂದಿದ್ದಾರೆ.
ಯಾರು ದೂರು ನೀಡಿದ್ದಾರೆ ಎಂಬುದು ಎಂದು ತಿಳಿದಿದೆ. ಪಾಪ ಆಕೆಗೆ ಆರೋಗ್ಯ ಸರಿಯಿಲ್ಲವೇನೋ ಎಂದಿದ್ದಾರೆ.
ಇರಲಿ ಉಪಕಾರ ಮಾಡಿದ್ದಕ್ಕೆ ನನ್ನ ವಿರುದ್ಧವೇ ಕೇಸ್ ದಾಖಲಿಸಿದ್ದಾರೆ. ತೊಂದರೆಯಿಲ್ಲ, ನಾನು ಹೆದರಲ್ಲ, ಎಲ್ಲವನ್ನೂ ಕಾನೂನು ಪ್ರಕಾರವೇ ಎದುರಿಸುತ್ತೇನೆ ಎಂದು ನಗುತ್ತಲೇ ಆತ್ಮವಿಶ್ವಾಸದಿಂದ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post