ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗದ ಪರಿಸ್ಥಿತಿಯ ಸಂಕಷ್ಟದಲ್ಲಿರುವ ವಾಹನ ಚಾಲಕರಿಗೆ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ರವರು ತಮ್ಮ ಒಂದು ತಿಂಗಳ ವೇತನದಲ್ಲಿ ಸುಮಾರು 150 ಚಾಲಕರ ಕುಟುಂಬಗಳಿಗೆ ಅಕ್ಕಿ ಹಾಗೂ ದವಸದಾನ್ಯ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಇಂದು ವಿಶ್ವದಲ್ಲಿ ಮಹಾಮಾರಿ ಕೊರೊನಾ ವೈರಸ್‌ನಿಂದಾಗಿ ಚಾಲಕರು ವಾಹನಗಳನ್ನು ಹೊರತರಲಾರದೆ ಸಂಕಷ್ಟಕ್ಕೊಳಗಾಗಿದ್ದಾರೆ. ಅತ್ತ ಪ್ರಯಾಣಿಕರು ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೂ ಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಈ ಕುಟುಂಬಗಳಿಗೆ ಸಹಾಯವಾಗಲೆಂದು ಅರಿತ ಸ್ನೇಹಜೀವಿ ಪೊಲೀಸ್ ಉಮೇಶ್ ತಮ್ಮ ಒಂದು ತಿಂಗಳ ವೇತನವನ್ನು ಚಾಲಕರಿಗೆ ಮೀಸಲಿಟ್ಟು ಅಕ್ಕಿ ಹಾಗು ದವಸ ದಾನ್ಯಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಜೀವಿ ಬಳಗದ ಬಾಲು, ಶಿವು ಹಾಗೂ ಪ್ರವಾಸಿ ವಾಹನ ಚಾಲಕರಾದ ಸತೀಶ್, ಪುಟ್ಟಪ್ಪ, ಬಾಬು, ಕೆ.ಜೆ. ಜೋಶ್ವ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post