ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚನ್ನಪಟ್ಟಣ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಮುನ್ನ ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ #HDKumaraswamy ವಿರುದ್ಧ ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಜಮೀರ್ ಅಹ್ಮದ್, #ZameerAhmedKhan ಬಿಜೆಪಿ ಅವರಿಗಿಂತ ಕರಿಯ ಕುಮಾರಸ್ವಾಮಿ ಖತರ್ನಾಕ್ ಎಂದು ಹೇಳಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.
ಭಾಷಣದ ವೇಳೆ ಮಾತಿನ ಭರಾಟೆಯಲ್ಲಿ ಬಿಜೆಪಿಯವರಿಗಿಂತ #BJP ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್ ಎಂದು ಟೀಕಿಸಿದ್ದಾರೆ.

ಈ ಕುರಿತಂತೆ ರಾಜ್ಯ ಜನತಾದಳದ ಅಧಿಕೃತ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ವರ್ಣನಿಂದಕ, ಜನಾಂಗೀಯ ದ್ವೇಷಿ ಮಿಸ್ಟರ್ ಜಮೀರ್, ನಿನ್ನನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ನಿನ್ನ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ. ನಿನ್ನ ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದಿದೆ.
Also Read: ಹಿಂದೂಗಳಿಗೆ ಏರ್ ಇಂಡಿಯಾ ಬಿಗ್ ನ್ಯೂಸ್ | ಹಲಾಲ್ ಆಹಾರ ಕುರಿತಾಗಿ ಮಹತ್ವದ ಘೋಷಣೆ

ಸಿ.ಪಿ. ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭಿಸಿದರು. ನಂತರ ಜೆಡಿಎಸ್’ಗೆ ಹೋಗಬೇಕು ಎಂದುಕೊಂಡಿದ್ದರು. ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಎಂಬ ಕಾರಣಕ್ಕೆ ಜೆಡಿಎಸ್’ಗೆ ಹೋಗಿಲ್ಲ. ಈ ಹಿಂದೆ ಹಿಜಾಬ್ ಬೇಡ ಎಂದಿದ್ದೀರಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ? ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತಾನಂತೆ. ಏ ಕುಮಾರಸ್ವಾಮಿ ನೀನ್ ರೇಟು ಹೇಳು, ಮುಸಲ್ಮಾನರು ಒಂದೊಂದು ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ..’ ಎಂದು ವಾಗ್ದಾಳಿ ಮಾಡಿರುವ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ನಾಯಕರ ಮೇಲೆ ಜನಾಂಗೀಯ ದಾಳಿ, ನಿಂದನೆಗಳನ್ನು ಮಾಡುವುದೇ ಕಾಂಗ್ರೆಸ್ಸಿಗರ ಚಾಳಿ. ಇದು ಕಾಂಗ್ರೆಸ್ ಪಕ್ಷದ ನಿಜಮುಖ. ದ್ವೇಷ ಹರಡುವುದು, ವಿಭಜಿಸುವುದು ಮತ್ತು ಅಗೌರವ ತೋರುವುದು ಕಾಂಗ್ರೆಸ್ ಸಂಸ್ಕೃತಿ. ಇದಕ್ಕೆಲ್ಲ ಜೆಡಿಎಸ್ ಪಕ್ಷ ಹೆದರಿ ಕೂರುವುದಿಲ್ಲ ಎಂದು ಪೋಸ್ಟ್ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post