ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ #BYVijayendra ಅವರನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡಿದ್ದು, ಇಷ್ಟು ದಿನ ಒಂದು ಲೆಕ್ಕ, ಇನ್ನು ಮುಂದೆ ಹೊಸ ಲೆಕ್ಕೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ #HDDevegowda ಅವರು ಸಂಸತದೊಂದಿಗೆ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆರ್ಶೀವಾದ ಪಡೆದ ವೇಳೆ ಅವರು ಮಾತನಾಡಿದರು.

ದೇವೇಗೌಡರ ನಿವಾಸಕ್ಕೆ ಅಗಮಿಸಿದ ವಿಜಯೇಂಧ್ರ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ #PrajwalRevanna ಆತ್ಮೀಯವಾಗಿ ಸ್ವಾಗತಿಸಿ ದೇವೇಗೌಡ ಬಳಿಯಲ್ಲಿ ಕರೆದುಕೊಂಡು ಹೋದರು. ದೇವೇಗೌಡರಿಗೆ ನಮಸ್ಕರಿಸಿದ ವಿಜಯೇಂದ್ರ ಅವರಿಗೆ ಶಾಲು ಹೊದಿಸಿ, ಹಣ್ಣಿನ ಬುಟ್ಟಿ ಕೊಟ್ಟು ಮಾಜಿ ಪ್ರಧಾನಿಯವರು ಅಭಿನಂದಿಸಿದರು.

ಮುಂಬರುವ ಲೋಕಸಭಾ ಚುನಾವಣೆಗೆ #ParliamentElection2024 ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ದೇವೇಗೌಡರನ್ನು ವಿಜಯೇಂದ್ರ ಭೇಟಿಯಾಗಿರುವುದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು, ಶ್ರೀ ಸಿ.ಕೆ.ರಾಮಮೂರ್ತಿ ಅವರು, ಸಂಸದರಾದ ಶ್ರೀ ಪ್ರಜ್ವಲ್ ರೇವಣ್ಣ ಅವರು, ಮಾಜಿ ಶಾಸಕರಾದ ಶ್ರೀ ಡಿ.ಸಿ.ತಮ್ಮಣ್ಣನವರು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post