ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇಶದಾದ್ಯಂತ ಬೆಳಕಿನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಗರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಅತ್ಯಂತ ವಿಭಿನ್ನ ಹಾಗೂ ಮಾದರಿಯಾಗಿ ದೀಪಾವಳಿಯನ್ನು #Deepavali ಆಚರಿಸಲಾಗುತ್ತಿದೆ.
ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಆಯೋಜಿಸಲಾಗಿರುವ ಈ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ, ಜಲ ದೀಪಾವಳಿ ಉದ್ಘಾಟನೆ ಹಾಗೂ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕ ಜಿ.ಟಿ. ದೇವೇಗೌಡ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಜಿ.ಟಿ. ದೇವೇಗೌಡ #GTDevegowda ಅವರು ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು. ದೀಪವನ್ನು ಹಚ್ಚಿ ಎಲ್ಲರ ಜೀವನದಲ್ಲೂ ಈ ದೀಪಾವಳಿ ಒಳಿತನ್ನು ತರಲಿ ಬಾಳಿನ ಕತ್ತಲು ತೊರೆತಲಿ, ಎಲ್ಲರ ಕುಟುಂಬದಲ್ಲಿ ಸಂತಸ ತರಲಿ ಎಂದರು.
ಮಕ್ಕಳಿಗೆ ಪಟಾಕಿ ಹೊಡೆಯುವುದು ಎಂದರೆ ಸಂತೋಷ ಆದರೆ ಪಟಾಕಿಗಳನ್ನು ಹೊಡೆಯಬೇಕಾದರೆ ಎಚ್ಚರಿಕೆಯಿಂದ ಬರಬೇಕು. ಪಟಾಕಿಗಳನ್ನು ಕಡಿಮೆ ಮಾಡಿ ಹಣತೆಗಳನ್ನು ಹೆಚ್ಚು ಹಚ್ಚಬೇಕು. ಬೆಳಕೆಂಬುದು ಯಾವಾಗಲೂ ಶುಭದ ಸಂಕೇತ, ಈ ದೀಪದ ಜ್ಯೋತಿಯು ದೇಶಕ್ಕೆ ಒಳ್ಳೆಯದು ಮಾಡಲಿ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಪಟ್ಟಣ ಪಂಚಾಯ್ತಿ ವತಿಯಿಂದ ಸ್ವಚ್ಛ ದೀಪಾವಳಿಯ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು, ಕೆಲವು ಪಟಾಕಿ ಹೊಡೆಯುವುದು ಪರಿಸರಕ್ಕೆ ಹಾನಿಯಾಗಿ ಪ್ರಾಣಿ ಪಕ್ಷಿ ಸೇರಿದಂತೆ ಎಲ್ಲರಿಗೂ ತೊಂದರೆ ಆಗುತ್ತದೆ ಎಂದರು.
ದೀಪಾವಳಿ ಎಂದರೆ ಅದು ಪಟಾಕಿಯ ಸಂಭ್ರಮ, ಅಂತಹ ಸಂಭ್ರಮಕ್ಕಾಗಿ ಹಸಿರು ಪಟಾಕಿಗಳು ಬಂದಿವೆ. ಪಟಾಕಿಗಳನ್ನು ಹೊಡೆಯುವವರು ಹಸಿರು ಪಟಾಕಿಗಳನ್ನು ಹೊಡೆದು ಪರಿಸರದ ಕಾಳಜಿಯನ್ನು ತೋರಬೇಕು ಹಾಗೂ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ಪಟಾಕಿಗಳನ್ನು ಸಿಡಿಸಿದ ನಂತರ ಒಂದು ಕಡೆ ಸಂಗ್ರಹಿಸಿಟ್ಟು ಪಟ್ಟಣ ಪಂಚಾಯ್ತಿಯ ಸ್ವಚ್ಚತಾ ವಾಹನ ಬಂದಾಗ ಪಟಾಕಿಯ ತ್ಯಾಜ್ಯವನ್ನು ಅದಕ್ಕೆ ಹಾಕಬೇಕು. ಪಟಾಕಿಯ ಮದ್ದುಗಳು ವಿಷಪೂರಿತವಾಗಿದ್ದು ಹಸು ಕರು ಸೇರಿದಂತೆ ಯಾವುದೇ ಪ್ರಾಣಿಪಕ್ಷಿಗಳು ಪಟಾಕಿ ತ್ಯಾಜ್ಯ ಮದ್ದು ಮಿಶ್ರಿತವಾದ ಆಹಾರ ಸೇವಿಸಿದರೆ ಪ್ರಾಣಹಾನಿ ಆಗುತ್ತದೆ. ದಯಮಾಡಿ ಸಾರ್ವಜನಿಕರು ಸ್ವಚ್ಛ ದೀಪಾವಳಿ, ಹಸಿರು ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಬೇಕು ಎಂದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್ ಮಾತನಾಡಿ, ಹಿಂದೂ ಧರ್ಮದಲ್ಲಿ ದೀಪಾವಳಿ ಅಂತ್ಯತ ದೊಡ್ಡ ಹಬ್ಬ. ನಾಲ್ಕು ದಿನಗಳ ಕಾಲ ಆಚರಣೆ ಮಾಡುವ ದೀಪಾವಳಿ ಭಾರತದ ಗಡಿದಾಟಿ ಇಂದು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಆಚರಿಸುತ್ತಿರುವುದು ನಮ್ಮ ಹೆಮ್ಮೆಯ ಸಂಗತಿ. ದೀಪಾವಳಿ ಎಂದರೆ ದೀಪಗಳ ಹಬ್ಬ ಎಲ್ಲರೂ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ , ಇಂಜಿನಿಯರ್ ಶಿವಕುಮಾರ್, ಆರೋಗ್ಯ ಅಧಿಕಾರಿ ಪರಮೇಶ್ವರ, ಸಮುದಾಯ ಅಧಿಕಾರಿ ಶ್ರೀನಿವಾಸ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಆರ್. ಗಣೇಶ್, ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪುನೀತ್, ಕಾರ್ಯದರ್ಶಿ ನಾಗಭೂಷಣ, ಜಂಟಿ ಕಾರ್ಯದರ್ಶಿ ಪಾರ್ಶ್ವನಾಥ್, ನಿರ್ದೇಶಕರಾದ ಮಹೇಶಪ್ಪ, ಪೃಥು ಪಿ. ಅದ್ವೈತ್, ಬಡಾವಣೆಯ ನಿವಾಸಿಗಳು , ಮಹಿಳಾ ಮುಖಂಡರಾದ ಕಮಲಾ ನಟರಾಜ್, ಸರಸ್ವತಿ, ಪೂಜಾ ಪುನೀತ್, ಉಮಾ ಪುಟ್ಟರಾಜು, ಶೈಲ, ನಿರ್ಮಲ ಸೇರಿದಂತೆ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post