ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಬಳಿಕ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿನ ಅಬ್ಬರ ಕೇಳಿ ಬಂತು.
ವೇದಿಕೆ ಕಾರ್ಯಕ್ರಮ ಆರಂಭವಾದ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಅವರುಗಳನ್ನು ಸ್ವಾಗತಿಸಿದ ನಂತರ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರು ಹೇಳಿದ ವೇಳೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಘೋಷಣೆ ಕೂಗಿದರು.
ಯಡಿಯೂರಪ್ಪ ಹೆಸರು ಹೇಳಿದಾಕ್ಷಣ ಸುಮಾರು ಸೆಕೆಂಡ್’ಗಳ ಕಾಲ ಜನರು ಹರ್ಷೋದ್ಘಾರ ಮಾಡಿದರು. ಇಡಿಯ ಗಣ್ಯರ ಹೆಸರು ಪ್ರಸ್ತಾಪ ಮಾಡಿದಾಗ ಬಿಎಸ್’ವೈ ಹೆಸರು ಹೇಳಿದ ವೇಳೆ ಸಿಕ್ಕ ಪ್ರತಿಕ್ರಿಯೆ ಮೋದಿ ಹೊರತಾಗಿ ಬೇರೆ ಯಾರಿಗೂ ದೊರೆಯಲಿಲ್ಲ ಎಂಬುದು ಗಮನಾರ್ಹ.
ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಎಂದೇ ಕರೆಯಲ್ಪಡುವ ಯಡಿಯೂರಪ್ಪ ಅವರ ತಾಕತ್ತು ಹಾಗೂ ಅವರಿಗೆ ಇರುವ ಬೆಂಬಲ ಎಂತಹುದ್ದು ಎಂಬುದು ಅವರು ಮಾಜಿ ಆದ ನಂತರವೂ ಸಹ ಮತ್ತೆ ಮತ್ತೆ ಈ ಮೂಲಕ ಸಾಬೀತಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post