ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೋವಿಡ್19 ನಿಯಮಾವಳಿಗಳನ್ನು ಪ್ರಮುಖ ಧಾರ್ಮಿಕ ಕೇಂದ್ರ ಪೂರ್ಣಪ್ರಜ್ಞ ವಿದ್ಯಾಪೀಠ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಯು. ಕೇಶವಾಚಾರ್ಯ ಅವರು, ವಿದ್ಯಾಪೀಠದ ಶ್ರೀಕೃಷ್ಣನ ಸನ್ನಿಧಾನದಲ್ಲಿ ಪ್ರತಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್19 ಕಾನೂನುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.

ವಿಶೇಷವೆಂದರೆ ದೇವಾಲಯದ ಪ್ರವೇಶ ದ್ವಾರದ ಬಳಿ ಭಗವಂತನ ದರ್ಶನಕ್ಕೆ ಜಯನಗರದ 3 ನೆಯ ಬ್ಲಾಕ್ ನಿವಾಸಿ ಅಜ್ಜ ಶ್ರೀನಿವಾಸ್ ಕುಲಕರ್ಣಿ ಅವರ ಜೊತೆ ಅವರ ಮೊಮ್ಮಗಳು ಬೃಹತಿ ವೇಣುಗೋಪಾಲ್ ವಿದ್ಯಾ ಪೀಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಪಡೆದಳು. ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲೆಗೆ ಅವರ ಅಜ್ಜ ಮಾಸ್ಕ್ ಧರಿಸಿ ಕರೆದು ಕೊಂಡು ಬಂದಿದ್ದ ಅವರು ನಾವು ಕಟ್ಟು ನಿಟ್ಟಿನಲ್ಲಿ ಸರಕಾರ ತಿಳಿಸಿರುವ ಕ್ರಮಗಳನ್ನು ಪಾಲಿಸುವ ಕುರಿತು ಹೇಳಿದರು.

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093







Discussion about this post