ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ತಮ್ಮ ಸಂಗೀತ ಪ್ರತಿಭೆಯ ಮೂಲಕ ಈಗಾಗಲೇ ಸ್ಯಾಂಡಲ್’ವುಡ್’ನಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗ ಋತ್ವಿಕ್ ಮುರಳೀಧರ್ ಅವರು ರಾಗ ಸಂಯೋಜನೆ ಮಾಡಿರುವ ಗೀತೆಗೆ ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ಅವರು ಧ್ವನಿಯಾಗಿದ್ದಾರೆ.
ಹೌದು… ಟೀಂ ತ್ರಿವರ್ಗ ಫಿಲ್ಮಂ ನಿರ್ಮಾಣದಲ್ಲಿ ನಿರ್ಮಾಣವಾಗುತ್ತಿರುವ ಮಂಗಳವಾರ ರಜಾ ದಿನ ಚಿತ್ರದಲ್ಲಿ ತಂದೆಯ ಕುರಿತಾಗಿನ ಅದ್ಬುತ ಸಾಹಿತ್ಯವೊಂದನ್ನು ಗೌಸ್ ಪೀರ್ ಎನ್ನುವವರು ರಚಿಸಿದ್ದಾರೆ.ಈ ಸಾಹಿತ್ಯಕ್ಕೆ ಶಿವಮೊಗ್ಗದ ಯುವ ಪ್ರತಿಭೆ ಋತ್ವಿಕ್ ಮುರಳೀಧರ್ ಅವರು ಸಂಗೀತ ನೀಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಹಾಡಿದ್ದಾರೆ.
ನೀನೆ ಗುರು, ನೀನೆ ಗುರಿ, ನೀನೆ ಗುರುತು ಎಂಬ ಮಧುರವಾದ ಗೀತೆಯನ್ನು ಸ್ಯಾಂಡಲ್’ವುಡ್ ನಟ ಅಭಿಶೇಕ್ ಅಂಬರೀಷ್ ಅವರು ಇಂದು ಬಿಡುಗಡೆ ಮಾಡಿದ್ದು, ಯೂಟ್ಯೂಬ್’ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿವಮೊಗ್ಗದ ಪ್ರತಿಭೆ ಋತ್ವಿಕ್ ಮುರಳೀಧರ್
ಯುವಿನ್ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಂಗಳವಾರ ರಜಾದಿನ ಚಿತ್ರದಲ್ಲಿ ಚಂದನ್ ಆಚಾರ್, ಲಾಸ್ಯ ನಾಗ್, ಜಹಂಗೀರ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ರಜನಿಕಾಂತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post