ಬೆಂಗಳೂರು: ಯುರೋಪ್, ಅಮೆರಿಕಾ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಪ್ರಖ್ಯಾತಗೊಂಡಿರುವ ಪ್ಯಾಡಲ್ ಟೆನ್ನಿಸ್ ಕ್ರೀಡೆಯನ್ನು ಪ್ರಶಾಂತ್ ಸಂಬರಗಿ ಅವರು ರಾಜ್ಯಕ್ಕೆ ತಂದ ಬೆನ್ನಲ್ಲೇ ಇದಕ್ಕೆ ಸ್ಯಾಂಡಲ್’ವುಡ್ ತಾರೆಯರು ಒಬ್ಬೊಬ್ಬರೇ ಫಿದಾ ಆಗುತ್ತಿದ್ದಾರೆ.
ಸದಾಶಿವನಗರದಲ್ಲಿ ನಿರ್ಮಾಣಗೊಂಡಿರುವ ಪ್ಯಾಡಲ್ ಟೆನ್ನಿಸ್ ಕೋರ್ಟ್’ನಲ್ಲಿ ಹೊಸ ಆಟವನ್ನು ಆಡಿದ ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಪಾಶ್ಚಿಮಾತ್ಯ ಆಟವನ್ನು ಕೈತುದಿಯಲ್ಲಿ ಸಂಭ್ರಮಿಸಿದರು.
ಇನ್ನು, ಪುನೀತ್ ಆಡಿದ ಬೆನ್ನಲ್ಲೇ ಸ್ಯಾಂಡಲ್’ವುಡ್’ನಲ್ಲಿ ಪ್ಯಾಡಲ್ ಟೆನ್ನಿಸ್ ಹವಾ ಸೃಷ್ಠಿಸುತ್ತಿದ್ದು, ನಟರಾದ ಧರ್ಮ, ಕೀರ್ತಿ ಸೇರಿದಂತೆ ಹಲವರು ಇದನ್ನು ಸಂಭ್ರಮಿಸಿದ್ದಾರೆ.
ಏನಿದು ಪ್ಯಾಡಲ್ ಟೆನ್ನಿಸ್:
“ಟೆನ್ನಿಸ್ ವಿತ್ ವಾಲ್ಸ್” ಹಾಗೂ “ಸ್ಕ್ವಾಷ್ ಇನ್ ದಿ ಸನ್” ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಕ್ರೀಡೆಯನ್ನು ಮಹಿಳೆ ಪುರುಷ ಎಂಬ ಬೇಧಭಾವವಿಲ್ಲದೆ ಎಲ್ಲ ವಯೋವರ್ಗದವರೂ ಆಡಬಹುದಾಗಿದೆ. ಸುಲಭವಾಗಿ ಕಲಿಯಬಹುದಾದ ಈ ಕ್ರೀಡೆಯನ್ನು ಗಾಜಿನ ಕೋರ್ಟ್ ಒಳಗೆ ಆಡುತ್ತಾರೆ. 66 ಅಡಿ 33 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಪಾಡಲ್ ಟೆನ್ನಿಸ್ ಕೋರ್ಟ್ ಟಿನ್ನಿಸ್ ಕೋರ್ಟ್’ಗಿಂತ ಚಿಕ್ಕದಾಗಿದೆ. ಬಹುಬೇಗನೆ ಕಲಿಯಬಹುದಾದ ಈ ಕ್ರೀಡೆಯನ್ನು ಜಗತ್ತಿನಾದ್ಯಂತ 3 ಕೋಟಿ ಜನರು ಆಡುತ್ತಾರೆ.
Discussion about this post