ಬೆಂಗಳೂರು: ಸ್ಯಾಂಡಲ್’ವುಡ್’ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ನಟಸಾರ್ವಭೌಮ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ಭಾರೀ ನಿರೀಕ್ಷೆಯ ದಿನಗಳ ನಂತರ ಇಂದು ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್’ನಲ್ಲಿ ವೀಕ್ಷಿಸಿದ್ದು, ಸಖತ್ ರೆಸ್ಪಾನ್ಸ್ ಬರುತ್ತಿದೆ.
ಟ್ರೇಲರ್ ನೋಡಿ:
ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹಿರಿಯ ನಟಿ ಬಿ ಸರೋಜಾದೇವಿ, ಅಚ್ಯುತ್, ರವಿಶಂಕರ್ ಅವರು ಪೋಷಕ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರ ಪಾತ್ರವೂ ವಿಶೇಷವಾಗಿದೆ. ಚಿತ್ರಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೂಡಿಕೆ ಮಾಡಿದ್ದು, ಪವನ್ ಒಡೆಯರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇನ್ನು ಈ ಕುರಿತಂತೆ ಮಾತನಾಡಿರುವ ಪುನೀತ್ ರಾಜಕುಮಾರ್, ಟ್ರೇಲರ್ ಬಿಡುಗಡೆಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿಕೊಟ್ಟ ಎಲ್ಲಿರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಇಡಿಯ ಚಿತ್ರ ತಂಡದ ಬೆಂಬಲ, ಸಹಕಾರಕ್ಕೆ ತಾವು ಆಬಾರಿಯಾಗಿದ್ದು, ಇದೇ ರೀತಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ಟ್ರೇಲರ್’ನ್ನು ಇಷ್ಟಪಟ್ಟ ರೀತಿಯಲ್ಲೇ ಚಿತ್ರ ಬಿಡುಗಡೆಯಾದ ನಂತರ ನೋಡಿ ಬೆಂಬಲಿಸಿ ಎಂದು ಕೋರಿದ್ದಾರೆ.
Discussion about this post