Sunday, October 26, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

“ಪ್ರಾರ್ಥನಾರೂಪಿ ಪವಾಡ ಪುರುಷ –ಶ್ರೀ ರಾಘವೇಂದ್ರರು”

August 18, 2019
in Special Articles
0 0
0
Share on facebookShare on TwitterWhatsapp
Read - 3 minutes

ಇಂದು ವಿಶ್ವದೆಲ್ಲಡೆ ಜೀವ ಬೇಧವಿಲ್ಲದೆ ಬುದ್ಧಿ ಜೀವಿಗಳು, ಜನ ಸಾಮಾನ್ಯರು ಎಂಬ ತಾರತಮ್ಯವಿಲ್ಲದೆ ಜಾತಿ ಮತ ಪಂಥಗಳ ಹಂಗಿಲ್ಲದೆ ಪೂಜಿಸಲ್ಪಡುವ ಆರಾಧಿಸುವ ಭಕ್ತಿ ಸಾಮ್ರಾಜ್ಯದ ಕೆಲವೇ ಕೆಲವರ ಪೈಕಿ ಮಂತ್ರಾಲಯ ಶ್ರೀ ಗುರುರಾಘವೇಂದ್ರರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವತ್ತಿಗೂ ಗುರುವಾರ ಬಂತೆಂದರೆ ಅದು ಎಲ್ಲರ ಪಾಲಿಗೆ ಸಡಗರ – ಸಂಭ್ರಮದ ರಾಯರ ನೆನೆಯುವ ಪುಣ್ಯದಿನ. ಅವರ ಜೀವನಗಾಥೆ ಭಕ್ತರ ಪಾಲಿಗೆ ಕುಳಿರ್‍ಗಾಳಿಯ ಸ್ಪರ್ಶ, ಎಂದಿಗೂ ಆರದೆ ದೇದೀಪ್ಯಮಾನವಾಗಿ ಉರಿಯುವ ನಂದಾದೀಪ. ಅವರ ದರ್ಶನ ಮಾತ್ರಕ್ಕೆ ಜೀವನದ ಮುಗ್ಗುಲು ಬದಲಾಯಿಸುವ ಸಾಮರ್ಥ್ಯವಿದೆ. ಸರಳ ಆಧ್ಯಾತ್ಮಿಕತೆಯ ಅವರ ಜೀವನ ತತ್ವಗಳು ಅಳುವ ಕಂದನಿಗೆ ಮಾತೆಯ ಲಾಲಿಯಿದ್ದಂತೆ. ಶ್ರೀ ರಾಘವೇಂದ್ರರು ಮಹಾಮಹಿಮರಾಗಲು ಪರಮಾತ್ಮ ಪಾದಾರವಿಂದಗಳಲ್ಲಿ ಸತತ ಸೇವೆಯೇ ಕಾರಣ. ಅಂತೆಯೇ ಅವರ ಶಾಪಾನುಗ್ರಹ ಶಕ್ತಿ; ಇನ್ನೊಂದು ಅವರ ಸಿದ್ದಾಂತ ಸಾರಸ್ವತ ಸೇವೆ.

ರಾಯರು, ಈ ಶಬ್ದದಲ್ಲಿ ಅಖಿಲಭೂಮಂಡಲವನ್ನು ಸೆಳೆಯುವ ಮಹಾಶಕ್ತಿ ಇದೆ, ಪರಮೇಶ್ವರನ ಪ್ರೀತಿಯನ್ನು ಸಂಪಾದಿಸುವ ಅನುಭೂತಿಯು ಈ ಶಬ್ದಶ್ರವಣದಿಂದ ಆಗುತ್ತದೆ. ಹಾಗಾಗಿ ಈ ಶಬ್ದ ಮಂಗಲಮಯ . ರಾಯರು ಅಂದರೆ ಪುಣ್ಯದ ಪರ್ವತ , ರಾಯರೆಂದರೆ ಕರುಣೆಯ ಮಡಿಲು , ರಾಯರೆಂದರೆ ಶರಣಾಗತರ ಕಾಮಧೇನು, ರಾಯರೆಂದರೆ ಆಧ್ಯಾತ್ಮಿಕ ಬಾಳಿನ ಜೇನು, ರಾಯರೆಂದರೆ ತತ್ವಗ್ರಂಥಭಂಡಾರ, ರಾಯರೆಂದರೆ ತಾಪತ್ರಯಪರಿಹಾರ, ನಮಗೆ ರಾಯರೇ ಗತಿ, ರಾಯರೆಂದರೆ ದುರಿತಗಳನ್ನು ಪರಿಹಾರ ಮಾಡಿ ಸನ್ಮಾರ್ಗವನ್ನು ತೋರಿ, ಉತ್ಕ್ರಷ್ಟವಾಧ ಸುಖವನ್ನು ಕೊಡುವವರು ಎಂದು ಚಿಂತನೆ ಮಾಡುವವನೇ ಭಾಗ್ಯಶಾಲಿ, ಜಯಶೀಲ, ಸದ್ಗುಣಶಾಲಿಯಾಗುತ್ತಾನೆ.

ಪೂರ್ವದಲ್ಲಿ ಬ್ರಹ್ಮದೇವನ ಶಾಪವನ್ನು ವರವಾಗಿ ಸ್ವೀಕರಿಸಿದ ಶಂಕು ಕರ್ಣನೆಂಬ ದೇವತೆ, ಕೃತಯುಗದಲ್ಲಿ ಪ್ರಹ್ಲಾದ, ದ್ವಾಪರದಲ್ಲಿ ಬಾಹ್ಲಿಕ ರಾಜ, ಕಲಿಯುಗದಲ್ಲಿ ವ್ಯಾಸರಾಜರು ಮತ್ತು ಕೊನೆಯಲ್ಲಿ “ರಾಘವೇಂದ್ರ”ರಾಗಿ ಪ್ರಜ್ವಲಿಸಿದರು ಎಂದು ಪ್ರತೀತಿ. ಸನ್ಯಾಸಾಶ್ರಮ ಪಡೆಯುವ ಮೊದಲು ಮೂವರು ಜ್ಯೋತಿಷಿಗಳು ವೆಂಕಟನಾಥರ (ರಾಯರ ಪೂರ್ವಾಶ್ರಮದ ಹೆಸರು) ಜಾತಕ ಕುಂಡಲಿ ನೋಡಿ ಒಬ್ಬನು ಅವರ ಆಯುಷ್ಯ 100 ವರ್ಷ, ಎರಡನೇಯವರನು 300 ವರ್ಷವೆಂದೂ, ಮೂರನೆಯವರನು 700 ವರ್ಷ ಎಂದು ಹೇಳಲು, ಮೊದಲನೆಯದು ದೇಹದೃಷ್ಠಿಯಿಂದ, ಎರಡನೆಯದು ಗ್ರಂಥ ದೃಷ್ಠಿಯಿಂದ ಹಾಗೂ ಮೂರನೆಯದು ವೃಂದಾವನ ಮಹಿಮೆ ಎಂದೂ ವಿವರಣೆಯನ್ನು ಅವರೇ ನೀಡಿದ್ದಾರೆ. ಧಾರ್ಮಿಕ ಸೌಹಾರ್ದ, ಭಾವೈಕ್ಯಕ್ಕೆ ಒತ್ತು ಕೊಟ್ಟು ದೇಶದೆಲ್ಲಡೆ ಜಾತಿ, ಮತ ಹಾಗೂ ವರ್ಣಬೇಧ ತಾಂಡವವಾಡುತ್ತಿದ್ದಾಗ, “ಜಾತಿಗಿಂತ ನೀತಿ ಮೇಲು, ಮಡಿಗಿಂತ ಭಕ್ತಿ ಮೇಲು” ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿ ಭಕ್ತಿಯ ಶಕ್ತಿಯನ್ನು ಆಧುನಿಕ ಯುಗದಲ್ಲಿ ಸಮರ್ಥವಾಗಿ ತೋರಿದ ಯತಿ ಶ್ರೇಷ್ಠರು.

“ಇಂದು ಎನಗೆ ಗೋವಿಂದ” ಹಾಡಿನ ಮೂಲಕ ಹರಿದಾಸರಿಗೆ ಸ್ಫೂರ್ತಿಯಾಗಿ, ವಿಜಯದಾಸರಿಗೆ ದರ್ಶನ ನೀಡಿ, ಗೋಪಾಲದಾಸರಿಗೆ ದಿಕ್ಕಾಗಿ, ಜಗನ್ನಾಥದಾಸರಿಗೆ ದೆಸೆಯಾಗಿ, ಮುಂದೆ ಬಂದ ದಾಸ ಪಂಥದವರಿಗೆ ಪ್ರೇರಕ ಶಕ್ತಿಯಾದವರು ಶ್ರೀ ರಾಘವೇಂದ್ರ ಸ್ವಾಮಿಗಳು, ಭಕ್ತ ವೃಂದವನ್ನು ಭಗವಂತನೆಡೆಗೆ ಕರೆದೊಯ್ಯುವ ಹರಿಗೋಲಾದವರು.

ಶ್ರೀ ರಾಘವೇಂದ್ರರು “ಹೃದಯ – ಬುದ್ಧಿ”ಗಳ ಸಂಗಮವಾದಂತೆ ಇದ್ದವರು. ಇವರಲ್ಲಿ ಭಾವ ಜೀವನವು, ಹರಿತವಾದ ತೀಕ್ಷ್ಣ ಬುದ್ಧಿಯು ಮಧುರವಾಗಿ ಸಮನ್ವಯಗೊಂಡಿತ್ತು. ಅವರು ಶುಷ್ಕ ವೇದಾಂತಗಳಾಗಿರಲಿಲ್ಲ. ಸಾಹಿತ್ಯ ಕಲೆ-ಸಂಗೀತಗಳ ಆರಾಧಕರೂ ಆಗಿದ್ದರು. ಜನ್ಮ ತಾಳಿದ್ದು ಸಾಮಾನ್ಯವಾದ ಕುಟುಂಬದಲ್ಲಾದರೂ ಸಾಧನೆ – ತಪಸ್ಸಿನಿಂದ ದೈವತ್ವಕ್ಕೆ ಏರಿದವರು. “ಸಾಧಕ – ಸಂಸಾರಿ ಸಂಸಾರದಲ್ಲಿದ್ದರೂ ಸಂಯಮದಿಂದ ಬದುಕನ್ನು ಹೇಗೆ ಸಾಧಿಸಿ – ಸನ್ಯಾಸಿಯಾಗಿ ಬೃಹತ್ ಕುಟುಂಬಿಯಾದ ಎಂಬುದು ಅವರ ಜೀವನ ಗಾಥೆ ನಮಗೆ ಮಾದರಿ.

ರಾಘವೇಂದ್ರರು ಭೌತಿಕ ನೆಲೆಯಲ್ಲಿ ಅದೃಶ್ಯರಾದರೂ “ಕುಂದದೆ ವರ ಮಂತ್ರಾಲಯ”ದಲ್ಲಿ ಅದ್ಯಪಿ ಸನ್ನಿಹಿತರಾಗಿದ್ದಾರೆಂದು ಭಕ್ತರ ನಂಬಿಕೆ. ಮಂಚಾಲೆ ಮಂತ್ರಾಲಯವಾದದುದು ರಾಘವೇಂದ್ರಸ್ವಾಮಿಗಳು ಇದನ್ನು ತಮ್ಮ ನಿರ್ಣಯ ಕ್ಷೇತ್ರವಾಗಿ ಆರಿಸಿಕೊಂಡ ನಂತರವೇ. ಬೃಂದಾವನಕ್ಕೆಂದು ಭೂಮಿಯನ್ನು ಅಗೆಯುತ್ತಿದ್ದಾಗ ರಾಶಿ ರಾಶಿ ಯಾಗಿ ಇದ್ದಿಲು ದೊರೆಕಿತೆಂದು, ಪ್ರಹ್ಲಾದನು ಯಾಗ ಮಾಡಿದ ಸ್ಥಳವೇ ಅದೆಂದೂ ನಂಬಿಕೆಯಿದೆ, ಅಂತೂ ಅವರು ಬೃಂದಾವನವಾದ ಸ್ಥಳ ಮಂತ್ರಸಿದ್ದಕ್ಷೇತ್ರವೆಂದು ಪ್ರಸಿದ್ದವಾಯಿತು. ಅವರ ಬೃಂದಾವನಗಳಿರುವೆಡೆಗಳೆಲ್ಲ ಪ್ರದಕ್ಷಿಣೆ, ನಮನಸ್ತುತಿ, ಮೃತ್ತಿಕಾ – ತೀರ್ಥ – ಪಾದೋದಕ ಸೇವನ ಇವು ವ್ಯಾಪಕವಾಗಿ ನಡೆಯುತ್ತಲೆ ಇದೆ.

ವ್ಯಾಸರ ಸೂತ್ರಗಳೆಂಬ ಪಾತ್ರೆಯಲ್ಲಿ ಆಚಾರ್ಯ ಮಧ್ವರ ಭಾಷ್ಯವೆಂಬ ಬತ್ತಿಯನ್ನಿಟ್ಟು ಜಯತೀರ್ಥರ “ಸುಧಾ” ಎಂಬ ತುಪ್ಪ ಹಾಕಿ, ರಾಘವೇಂದ್ರ ಮಂತ್ರ ದೀಪ ಎಂಬ ದೀಪವನ್ನು ಹಚ್ಚಿಟ್ಟ ಜಗನ್ಮಾನ್ಯರು. ಕಲಿಯ ಪ್ರಾಬಲ್ಯಕ್ಕೆ ಒಳಗಾಗಿ ಇನ್ನಿಲ್ಲದ ಸಂಕಷ್ಟಗಳಿಗೆ ಒಳಗಾಗುತ್ತಿರುವ ಸಾತ್ವಿಕ ಜನರಿಗೆ ಮಂತ್ರಾಲಯ ಗುರುರಾಯರು ಬೃಂದಾವನದಲ್ಲಿಯೇ ಸಂಜೀವಿನಿಯಾಗಿ ರಕ್ಷಣೆ ಮಾಡುತ್ತಿರುವರು.

ಧಾರ್ಮಿಕ ಚೌಕಟ್ಟಿನಲ್ಲಿ ಕೇವಲ ಕೆಲವರಿಗೆ ಮಾತ್ರ ದೊರಕುವಂತಾಗಿದ್ದ ‘ಆರಾಧನಾ ಭಾಗ್ಯ’ ಇಂದು ಸಾರ್ವತ್ರಿಕವಾಗಿ, ಉಳ್ಳವರು ,ಇಲ್ಲದವರು ಕೂಡ ಇಷ್ಟಪಟ್ಟು ಆಚರಿಸಬಹುದಾದ ಉತ್ಸವವಾಗಿದೆ. ಇದಕ್ಕೆ ಕಾರಣ ಶ್ರೀರಾಯರ ಸರಳತನ. ತಮ್ಮ ಔದಾರ್ಯ-ತ್ಯಾಗದಿಂದಾಗಿ ಜನ ಮಾನಸದಲ್ಲಿ ನೆಲೆಸಿದವರು. ಗುರುರಾಜರು. ಮುಸ್ಲಿಂ ದೊರೆ ಸಿದ್ದಿಮಸೂದ್ ಖಾನನ ಹೃದಯ ಗೆದ್ದರು, ದನ ಕಾಯುವವನನ್ನೂ ಹರಸಿದರು. ಆಂಗ್ಲಾಧಿಕಾರಿ, ಕ್ರೈಸ್ತಾನುಯಾಯಿ ಸರ್ ಥಾಮಸ್ ಮನ್ರೋ ಕೂಡ ಅಚ್ಚರಿ ಪಡುವಂತೆ ಪವಾಡ ಮೆರೆದರು.

ದೀನನ ಭಕ್ತಿಗೆ ಸೋತು ಹಿಡಿ ಸಾಸಿವೆಗೆ ಮಹತ್ವ ನೀಡಿ ಭಕ್ತಿಯ ಪ್ರಾಧಾನ್ಯವನ್ನು ಸಾರಿದರು. ಮಾತೃಭಾಷೆ ತಮಿಳನ್ನು ಬಳಸಿ, ಕಸ್ತೂರಿ ಕನ್ನಡವನ್ನು ಆಡು ಭಾಷೆಯನ್ನಾಗಿಸಿಕೊಂಡು , ದೇವಭಾಷೆ ಸಂಸ್ಕೃತದಲ್ಲಿ ಗ್ರಂಥ ರಚಿಸಿ, ಬಿಜಾಪುರದ ಸುಲ್ತಾನನೊಟ್ಟಿಗೆ ಉರ್ದುವಿನಲ್ಲಿ ಸಂಭಾಷಿಸಿ, ಮನ್ರೋವಿನೊಟ್ಟಿಗೆ ಆಂಗ್ಲಭಾಷೆಯಲ್ಲಿ ವ್ಯವಹರಿಸಿ, ತೆಲುಗು ನಾಡಿನಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶಿಸಿದ ರಾಯರು, ಭಾಷೆಯ ಭಾವೈಕ್ಯತೆ ಮೆರೆದ ಪ್ರತಿಭಾವಂತರು.

ಶಾಸ್ತ್ರದ ಮೇಲೆ ರಾಯರ ಪ್ರಭುತ್ವ ದೊಡ್ಡದು .ಅವರ ಕೃತಿಗಳ ಅಧ್ಯಯನ ದೊಡ್ಡ ಸಾಧನ , ಅಷ್ಟೇ ಸಿದ್ದಿಯೂ ಕೂಡಾ, ಅವರ ವಿದ್ವತ್ತಿನ ಮುಖವೇ ಅವರ ನಿಜವಾದ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಅವರ ಕೃತಿಗಳು ಪಂಡಿತ ರಂಜಕ, ಪಾಮರ ಬೋಧಕ, ಜ್ಞಾನ ಸಾಧಕ, ವಿದ್ಯಾದಾಯಕ, ಬುದ್ದಿ ಪೋಷಕಗಳಾಗಿವೆ.

ಲೋಕಕಲ್ಯಾಣಕ್ಕಾಗಿಯೇ ಅವತಾರ ಮಾಡಿ, ಭಗವಂತನ ಅತ್ಯದ್ಭುತ ಅವತಾರಕ್ಕೆ ಕಾರಣರಾಗಿ ನಂಬಿ ಬಂದ ಭಕ್ತರನ್ನು ಉದ್ಧಾರದ ಹೆದ್ದಾರಿಯತ್ತ ಕೊಂಡೊಯ್ಯುತ್ತ “ಜಗದ್ಗುರು”ಗಳು ಎಂಬ ಪದಕ್ಕೆ ಅನ್ವರ್ಥನಾಮರಾಗಿ ಕಲ್ಪವೃಕ್ಷ ಕಾಮಧೇನು ಸದೃಶರಾದ, ಅಗಮ್ಯ ಮಹಿಮರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವನ್ನು ಪಂಚರಾತ್ರೋತ್ಸವವಾಗಿ ಶ್ರದ್ಧಾಭಕ್ತ್ಯಾದರಗಳಿಂದ ತದಂಗವಾಗಿ ವಿಶೇಷವಾಗಿ ಪ್ರಾಣದೇವರಿಗೆ ಹಾಗೂ ರಾಯರ ಬೃಂದಾವನಕ್ಕೆ ವಾಯುಸ್ತುತಿ ಪುರಶ್ಚರಣೆ ಪೂರ್ವಕ ಮಧು, ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪ್ರಹ್ಲಾದರಾಜರಿಗೆ ಕನಕಾಭಿಷೇಕ, ಪಾದುಕಾ ಪೂಜೆ, ತುಳಸಿ ಪುಷ್ಪಾರ್ಚನೆ, ನಾದಲಹರಿ ಭವ್ಯ ಮೆರವಣಿಗೆ ರಥೋತ್ಸವದೊಂದಿಗೆ ತುಲಾಭಾರ, ಜ್ಞಾನ ಯಜ್ಞದ ಅಂಗವಾಗಿ ಗುರುರಾಜರ ಮಹಿಮಾ ಕುರಿತು ಉಪನ್ಯಾಸ, ಅಲಂಕಾರ ಪಂಕ್ತಿ , ಅನ್ನಸಂತರ್ಪಣೆ ಏರ್ಪಡಿಸಿದೆ.

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು

Tags: Dr. Gururaja PoshettihalliSpecial ArticleSri Raghavendra SwamigaluSri Rayaruಡಾ. ಗುರುರಾಜ ಪೋಶೆಟ್ಟಿಹಳ್ಳಿತತ್ವಗ್ರಂಥಭಂಡಾರಬಾಹ್ಲಿಕ ರಾಜಮಂತ್ರಾಲಯವಾಯುಸ್ತುತಿ ಪುರಶ್ಚರಣೆಶ್ರೀ ರಾಘವೇಂದ್ರ ಸ್ವಾಮಿಗಳು
Previous Post

ಜಮ್ಮು ಕಾಶ್ಮೀರದಲ್ಲಿ ಇಂಟರ್’ನೆಟ್ ಸೇವೆ ಮರು ಆರಂಭ

Next Post

ಕುಂದಾಪ್ರ ಜನತೆಯ ಪ್ರೀತಿ ಗೆದ್ದ ಆ ಮೂರಕ್ಷರದ ಹೆಸರಿನ ಯುವಕನ ಸಾಧನೆಯೇನು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕುಂದಾಪ್ರ ಜನತೆಯ ಪ್ರೀತಿ ಗೆದ್ದ ಆ ಮೂರಕ್ಷರದ ಹೆಸರಿನ ಯುವಕನ ಸಾಧನೆಯೇನು ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಚಿಕ್ಕಮಗಳೂರು | ಹೋಂ ಸ್ಟೇ ಬಾತ್ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

October 26, 2025

ರೈಲ್ವೆ ಸಿಬ್ಬಂದಿಯ ಸಮಯೋಚಿತ ಕಾರ್ಯ | ಪ್ರಯಾಣಿಕನ ಕೈ ಸೇರಿತು ಮರೆತು ಹೋಗಿದ್ದ ಲ್ಯಾಪ್ ಟಾಪ್

October 26, 2025

ಅ.30-31 | ವಿಜಯದಾಸರ ಆರಾಧನೆ | ಬೊಮ್ಮಸಂದ್ರ ರಾಯರ ಮಠದಲ್ಲಿ ವಿಶೇಷ ಪ್ರವಚನ

October 26, 2025

ಮೈಸೂರು | ಅ.26-ನ.1 ರವರೆಗೆ ವಿಶೇಷ ಜ್ಞಾನಸತ್ರ | ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ

October 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಚಿಕ್ಕಮಗಳೂರು | ಹೋಂ ಸ್ಟೇ ಬಾತ್ ರೂಂನಲ್ಲಿ ಯುವತಿ ಅನುಮಾನಾಸ್ಪದ ಸಾವು

October 26, 2025

ರೈಲ್ವೆ ಸಿಬ್ಬಂದಿಯ ಸಮಯೋಚಿತ ಕಾರ್ಯ | ಪ್ರಯಾಣಿಕನ ಕೈ ಸೇರಿತು ಮರೆತು ಹೋಗಿದ್ದ ಲ್ಯಾಪ್ ಟಾಪ್

October 26, 2025

ಅ.30-31 | ವಿಜಯದಾಸರ ಆರಾಧನೆ | ಬೊಮ್ಮಸಂದ್ರ ರಾಯರ ಮಠದಲ್ಲಿ ವಿಶೇಷ ಪ್ರವಚನ

October 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!