ನವದೆಹಲಿ: ತನ್ನ ಗರ್ಭಿಣಿ ಪತ್ನಿಗೆ ಮುತ್ತು ಕೊಡಲು ಮುಂದಾದ ಪತಿಯ ಅರ್ಧ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದಿದೆ.
ನವದೆಹಲಿಯ ರಾನ್ ಹೋಲಾ ಎಂಬಲ್ಲಿ ಈ ಘಟನೆ ನಡೆದಿದ್ದು, ತನ್ನ ಗರ್ಭಿಣಿ ಪತ್ನಿಗೆ ಆಕೆಯ ಪತಿ ಮುತ್ತು ಕೊಡಲು ಮುಂದಾದ ವೇಳೆ ಪತ್ನಿ ಇಂತಹ ಕೃತ್ಯ ಎಸಗಿದ್ದಾಳೆ.
ಈ ಕುರಿತಂತೆ ಪೊಲೀಸರು ರಾಷ್ಟ್ರೀಯ ಮಾಧ್ಯಮಗಳಿಗೆ ವರದಿ ನೀಡಿದ್ದು, ಸ್ಥಳೀಯರ ಪ್ರಕಾರ ತನ್ನ ಗಂಡ ನೋಡಲು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಹೆಂಡತಿ ಜಗಳ ಮಾಡುತ್ತಿದ್ದರು ಎಂದಿದ್ದಾರೆ.

ನಾಲಿಗೆ ತುಂಡಾದ ವ್ಯಕ್ತಿ ರಸ್ತೆ ಬದಿ ಚಿತ್ರ ಬಿಡಿಸುವ ಕಲಾವಿದನಾಗಿದ್ದು, ಈಕೆಯ ಪತ್ನಿ ಗರ್ಭಿಣಿಯಾಗಿದ್ದಾಳೆ. ವ್ಯಕ್ತಿ ತನ್ನ ಪತ್ನಿಗೆ ಮುತ್ತು ನೀಡಲು ಮುಂದಾದ ವೇಳೆ ಸಿಟ್ಟಿಗೆದ್ದ ಆಕೆ ಪತಿಯ ಅರ್ಧ ನಾಲಿಕೆಯನ್ನು ಕಚ್ಚಿ ತುಂಡು ಮಾಡಿದ್ದಾಳೆ. ವ್ಯಕ್ತಿಯನ್ನು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ನಾಲಿಗೆ ಅರ್ಧಕ್ಕೂ ಹೆಚ್ಚು ತುಂಡಾಗಿದ್ದು, ಈಗ ಮೊದಲಿನಂತೆ ಮಾತನಾಡುವುದು ಸಾಧ್ಯವಿಲ್ಲದ ವಿಚಾರ ಎಂದು ವೈದ್ಯ ಹೇಳಿರುವುದಾಗಿ ವರದಿಯಾಗಿದೆ.

















