ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ದಶಕಗಳಿಂದ ಕಗ್ಗಂಟಾಗಿದ್ದ ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಮುಂಬಡ್ತಿ ಸಮಸ್ಯೆ ಪರಿಹರಿಸಿ ಅರ್ಹ ನೌಕರರಿಗೆ ಕುವೆಂಪು ವಿಶ್ವವಿದ್ಯಾಲಯವು ಆದೇಶ ನೀಡಿದ್ದು, ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಧರ್ಮಪ್ರಸಾದ್, ರಾಮಲಿಂಗಪ್ಪ ಮತ್ತು ರಮೇಶ್ ಬಾಬು ಅವರನ್ನು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಸೋಮವಾರ ಕುಲಪತಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು.
Also Read: 2025ರೊಳಗೆ ಕ್ಷಯರೋಗ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಡಿಸಿ ಸೆಲ್ವಮಣಿ ಕರೆ
2017ರ ಮಾರ್ಚ್ 03ರ ಜೇಷ್ಠತಾ ಪಟ್ಟಿಯ ಅನ್ವಯ ಸಹಾಯಕ ಕುಲಸಚಿವ ವೃಂದದಿಂದ ಪ್ರಥಮ ದರ್ಜೆ ಸಹಾಯಕ ವೃಂದದವರೆಗೆ ಅರ್ಹ ನೌಕರರಿಗೆ ಕಳೆದ ಏಪ್ರಿಲ್ 06 ರಂದು ಮುಂಬಡ್ತಿಯ ಆದೇಶವನ್ನು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅವರು ನೀಡಿದ್ದರು.
ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಉಪಕುಲಸಚಿವೆ ಸುಮನ್ ಆಚಾರ್, ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಅಲಿ, ಸಿದ್ದರಾಮ, ಸುಶೀಲ, ರೇಖಾ ಸೇರಿದಂತೆ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post