ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳ ಕ್ರಿಯಾಶೀಲತೆಗೆ ಹೆಚ್ಚು-ಹೆಚ್ಚು ಒತ್ತು ನೀಡುವ ಓಪನ್ ಮೈಂಡ್ಸ್ ವರ್ಲ್ಡ್ Open Minds World School ಶಾಲೆ ಎಪ್ರಿಲ್ 15ರಂದು ಉದ್ಘಾಟನೆಗೊಳ್ಳಲಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಅವರು, ಜಾವಳ್ಳಿಯಲ್ಲಿ ಗರುಡಾ ಗ್ರೂಪ್’ನ ಜಿ. ಜಗನ್ನಾಥ ನಾಯ್ಡು ಮತ್ತು ಮಕ್ಕಳಾದ ಜಯಕುಮಾರ್-ಮಹೇಶ್ ಕುಮಾರ್ ನಿರ್ಮಿಸಿರುವ ವಿನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Former CM B S Yadiyurappa ನೆರವೇರಿಸಲಿದ್ದು,, ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, D H Shankaramurthy ಸಚಿವ ಕೆ.ಎಸ್. ಈಶ್ವರಪ್ಪ, Minister Eshwarappa ಸಂಸದರಾದ ಬಿ.ವೈ. ರಾಘವೇಂದ್ರ MP B Y Raghavendra ಹಾಗೂ ಜಿ.ಎಮ್. ಸಿದ್ದೇಶ್ವರ, ಶಾಸಕ ಅಶೋಕ ನಾಯ್ಕ್, ಎಮ್‌ಎಲ್‌ಸಿ ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಐಎಎಸ್ ಅಧಿಕಾರಿ ಕೆ.ಎ. ದಯಾನಂದ್ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಏನೆಲ್ಲಾ ವಿಶೇಷತೆ ಹೊಂದಿದೆ ಈ ಶಾಲೆ?
ಇಂದಿನ ನಾಗಲೋಟದ ಯುಗದಲ್ಲಿ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಸಂಶೋಧನೆ ಆಧಾರಿತ ಫಲಿತಾಂಶ, ವಿದ್ಯಾರ್ಥಿ ಕೇಂದ್ರಿತ ಮಾದರಿ ಫಲಿತಾಂಶಗಳಿಗೆ ಒತ್ತು ನೀಡುತ್ತಿದ್ದು, ಮಕ್ಕಳಲ್ಲಿನ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿ ಅದನ್ನು ಹೆಚ್ಚಿಸುವ ತರಬೇತಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಪೋಷಕರು ಮನೆಯಲ್ಲಿ ಹೆಚ್ಚು ಕಲಿಸಬೇಕಿರುತ್ತದೆ. ಆದರೆ, ಈ ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಜವಾಬ್ಧಾರಿ ಸಂಸ್ಥೆಗೆ ಸೇರಿರುತ್ತದೆ.
ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಈ ಸಂಸ್ಥೆ ತನ್ನ ವಿಭಿನ್ನ ಶೈಕ್ಷಣಿಕ ಪ್ರಯೋಗ ಹಾಗೂ ಕಲಿಕಾ ವ್ಯವಸ್ಥೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತಲುಪಿದೆ. ಹೀಗಾಗಿ ಕೇಂದ್ರ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿ ಪರಿಗಣಿಸಿದೆ.
ಕಳೆದ ಐದು ವರ್ಷದಿಂದ ಗೋಪಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್, ಇದೀಗ ಹೆಚ್ಚಿನ ಸೌಕರ್ಯವುಳ್ಳ ನೂತನ ಕಟ್ಟಡಕ್ಕೆ ಪೂರ್ಣವಾಗಿ ಸ್ಥಳಾಂತರಗೊಂಡಿದೆ.
ಪ್ರತಿ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ವೈಯಕ್ತಿಕ ಕಾಳಜಿಯೊಂದಿಗೆ ಅದನ್ನು ಬೆಳೆಸುವುದು ಇಂದಿನ ಸಮಾಜದಲ್ಲಿನ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬೆಳೆಸುವುದು, ಭವಿಷ್ಯದಲ್ಲಿ ವೈಯಕ್ತಿಕ ವರ್ಚಸ್ಸು ರೂಪಿಸಿಕೊಳ್ಳುವುದು. ಸೇರಿದಂತೆ ಮಗುವಿನ ಸಮಗ್ರ ವಿಕಾಸಕ್ಕೆ ಅಗತ್ಯ ವಿರುವ ಕಲಿಕೆಯನ್ನು ಈ ಶಾಲೆ ಬೆಳೆಸಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900015264ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post