ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಕಾಪು ಬೀಚ್‌ನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಮಧ್ಯಾಹ್ನ 3:30ರ ವೇಳೆಗೆ ಜೀವರಕ್ಷಕ ಸಿಬ್ಬಂದಿ (ಲೈಫ್ ಗಾರ್ಡ್ಸ್) ರಕ್ಷಿಸಿದ್ದಾರೆ.
ಈ ಪ್ರವಾಸಿಗರು ಶಿವಮೊಗ್ಗದ ರಾಹುಲ್ (22 ವರ್ಷ) ಮತ್ತು ಮೈಸೂರಿನ ತೇಜಸ್ ಎಂದು ಗುರುತಿಸಲಾಗಿದೆ.
ಜೀವ ರಕ್ಷಕ ಸಿಬ್ಬಂದಿಗಳಾದ ಪ್ರಶಾಂತ್ ಕರ್ಕೇರಾ ಮತ್ತು ಪ್ರಥಮ್ ಹಾಗೂ ಸ್ಕೂಬಾ ಡೈವರ್ ಜಾಕ್ ಮತ್ತು ಪ್ರದೀಪ್ ಕುಮಾರ್ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಬೀಚ್ ನಿರ್ವಹಣೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















