ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಶನಲ್ ಸೆಂಟರ್’ನಲ್ಲಿ ಅ.1ರ ನಾಳೆ ನಡೆಯಲಿರುವ ಸ್ವಚ್ಚ ಭಾರತ್ 2.0 ಹಾಗೂ ಅಮೃತ್ ಯೋಜನೆ 2.0 ಕುರಿತ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಮೇಯರ್ ಸುನಿತಾ ಅಣ್ಣಪ್ಪ ಅವರಿಗೆ ಪ್ರಧಾನಿಯವರಿಂದ ವಿಶೇಷ ಆಹ್ವಾನ ದೊರೆತಿದೆ.
ಸ್ವರದ ಕಡಲಿನ ಗಾನಯಾನ ಸರದಾರ ಎಸ್.ಪಿ. ಬಾಲಸುಬ್ರಹ್ಮಣ್ಯಂ: ಮನಮುಟ್ಟುವ ವೀಡಿಯೋ ನೋಡಿ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಖುದ್ಧು ಆಹ್ವಾನ ದೊರೆತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಮೇಯರ್ ಅವರು ಇಂದು ದೆಹಲಿಗೆ ತೆರಳುತ್ತಿದ್ದಾರೆ.
ರಾಜ್ಯದಿಂದ ಕೆಲವೇ ಕೆಲವು ಮೇಯರ್’ಗಳಿಗೆ ಈ ಆಹ್ವಾನವಿದ್ದು, ಇದರಲ್ಲಿ ಸುನಿತಾ ಅವರಿಗೆ ಅವಕಾಶ ದೊರೆತಿರುವುದು ಶಿವಮೊಗ್ಗಕ್ಕೆ ಸಂದ ವಿಶೇಷ ಗೌರವವಾಗಿದೆ.
ನಾಳೆ ನಡೆಯಲಿರುವ ಈ ವಿಶೇಷ ಸಭೆಯಲ್ಲಿ ಪ್ರಧಾನಿಯವರು ಖುದ್ಧು ಉಪಸ್ಥಿತರಿರಲಿದ್ದು, ಮಹಾನಗರ ಪಾಲಿಕೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸ್ವಚ್ಚ ಭಾರತ್ ಮತ್ತು ಅಮೃತ್ ಯೋಜನೆ ಕಾರ್ಯಕ್ರಮಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















