ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ #SecondPUCResult ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಪೇಸ್ ಕಾಲೇಜಿಗೆ #PACECollege ಶೇ.99.42ರಷ್ಟು ಫಲಿತಾಂಶ ಲಭಿಸಿದ್ದು, ಕಾಲೇಜಿನ ಮಹೀನ್ ಖಾನಮ್ ಅಫ್ರಿದಿ ಎಂಬ ವಿದ್ಯಾರ್ಥಿನಿ ರಾಜ್ಯಕ್ಕೇ 3ನೇ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ಒಟ್ಟು 697 ವಿದ್ಯಾರ್ಥಿಗಳಲ್ಲಿ 479 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು, 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು ಶೇ.99.42ರಷ್ಟು ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.
Also Read: ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿನ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು
ಕಾಲೇಜಿನ ಮಹೀನ್ ಖಾನಮ್ ಅಫ್ರಿದಿ ಎಂಬ ವಿದ್ಯಾರ್ಥಿನಿಯು 600ಕ್ಕೆ 596 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಕೀರ್ತಿ ತಂದಿದ್ದಾರೆ.
ಇವರ ಈ ಸಾಧನೆಗೆ ಕಾಲೇಜಿನ ಟ್ರಸ್ಟಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿವರು:
- ಮಹಿನ್ ಖಾನಮ್ ಅಫ್ರಿದಿ 596 (3ನೇ ರ‍್ಯಾಂಕ್)
- ಎಂ.ಎಸ್. ಸಾಧ್ವಿ 594 (5ನೇ ರ‍್ಯಾಂಕ್)
- ಯು.ವಿ. ಅಂಕಿತ್ 589 (10 ನೇ ರ‍್ಯಾಂಕ್)
- ಪಿ.ಒ. ಸಿಂಚನಾ 589 (10ನೇ ರ‍್ಯಾಂಕ್)
- ಧೃತಿ ಎಚ್. ಭಟ್ 589 (10 ನೇ ರ‍್ಯಾಂಕ್)
100 ಕ್ಕೆ 100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು
- ಹಿಂದಿ 2
- ಸಂಸ್ಕೃತ 50
- ಭೌತಶಾಸ್ತ್ರ 12
- ರಸಾಯನಶಾಸ್ತ್ರ 1
- ಗಣಿತ 35
- ಜೀವಶಾಸ್ತ್ರ 5
- ಕಂಪ್ ಸೈನ್ಸ್ 37
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















