ಕಲ್ಪ ಮೀಡಿಯಾ ಹೌಸ್ | ಪುಣೆ |
ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆ #Sushma Andhare ತೆರಳಬೇಕಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶುಕ್ರವಾರ ಮಹಾದ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ಪೈಲಟ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಸುಷ್ಮಾ ಅಂಧಾರೆ ಅವರು ಹೆಲಿಕಾಪ್ಟರ್ ಹತ್ತುವ ಮುನ್ನವೇ ಪತನಗೊಂಡಿರುವ ಕಾರಣ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಹೆಲಿಕಾಪ್ಟರ್ ಪತನಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಬಾರಾಮತಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಳಗ್ಗೆ 9.30ಕ್ಕೆ ಪ್ರಚಾರಕ್ಕಾಗಿ ಬಾರಾಮತಿ ಕಡೆಗೆ ತೆರಳಬೇಕಿತ್ತು. ಮಹಾಡ್‌ನಿಂದ ಬಾರಾಮತಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಕರೆದೊಯ್ಯಲು ಬಂದ ಹೆಲಿಕಾಪ್ಟರ್ ಸುಷ್ಮಾ ಅವರ ಮುಂದೆಯೇ ಅಪಘಾತ ಸಂಭವಿಸಿದೆ. ವಿಶೇಷವೆಂದರೆ ಹೆಲಿಕಾಪ್ಟರ್ ಪೈಲಟ್ ಸುರಕ್ಷಿತವಾಗಿದ್ದು. ಸ್ಥಳೀಯರ ನೆರವಿನಿಂದ ಪೈಲಟ್‌ನನ್ನು ಹೊರ ತೆಗೆಯಲಾಯಿತು ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























