ಕಲ್ಪ ಮೀಡಿಯಾ ಹೌಸ್ | ಪುರಿ(ಒಡಿಶಾ) |
ಸ್ವಂತ ತಂದೆ ಹಾಗೂ ಮಲತಾಯಿ ಸೇರಿಕೊಂಡು ಮಗಳನ್ನೇ ಭೀಕರವಾಗಿ ಹತ್ಯೆ ಮಾಡಿ, ಸುಟ್ಟು ಹಾಕಿರುವ ಘಟನೆ ನಡೆದಿದೆ.
ಪುರಿ ಜಿಲ್ಲೆಯ ಗೋಪ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೊನಾಲಿ ಮೊಹರಾಣ ಎಂಬಾಕೆಯೇ ಮೃತ ದುರ್ದೈವಿ.
2018ರಲ್ಲಿ ದುರ್ಗಾಚರಣ್ ಮೊದಲ ಪತ್ನಿ ಮೃತಪಟ್ಟಿದ್ದು, 2022ರಲ್ಲಿ ಮಮತಾ ಎಂಬಾಕೆಯನ್ನು ಆತ ವಿವಾಹವಾಗಿದ್ದಾನೆ. ಇದಾದ ಬಳಿಕ ಮಲತಾಯಿ ಹಾಗೂ ಆಕೆಯ ಸಹೋದರ ಜೀವನ್ ಓಜಾ ಸೇರಿಕೊಂಡು ಸೋನಾಲಿಗೆ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈಕೆಯ ಹಿರಿಯ ಸಹೋದರಿ ಮೊಹರಾಣ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗೋಪ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ತಂದೆ ದುರ್ಗಾಚರಣ ಮೊಹರಾಣನನ್ನು ಬಂಧಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















