ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇದರ ಪ್ರಕ್ರಿಯೆಗಳು ಆರಂಭವಾಗಿದೆ.
ಚುನಾವಣೆಗೆ ಮತಯಾಚನೆ ಪ್ರಕ್ರಿಯೆಗಳು ಆರಂಭವಾಗಲಿದ್ದು, ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ಕೆಲವೊಂದು ಪ್ರಶ್ನೆ ಕೇಳುವಂತೆ ಅಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನಾಗರಿಕರಿಗೆ ಕರೆ ನೀಡಿದ್ದಾರೆ.
ಈ ಕುರಿತಂತೆ ಕೆಲವೊಂದು ಸಲಹೆಗಳನ್ನು ಅವರು ನೀಡಿದ್ದು, ಅವುಗಳು ಈ ಕೆಳಕಂಡಂತಿವೆ.
ಗ್ರಾಮ ಪಂಚಾಯಿತಿ ಚುನಾವಣೆ ಬಂದಿವೆ. ಮಾಜಿ ಸದಸ್ಯರು ಮತ್ತೆ ಮತ ಕೇಳಲು ಬರಬಹುದು. ಅವರಿಗೆ ನಿಮ್ಮ ಪ್ರಶ್ನೆ ಹೀಗಿರಲಿ.
- ಕಳೆದ 5 ವರ್ಷದ ನಿಮ್ಮ ವಾರ್ಡಿಗೆ ಬಂದ ಅನುಧಾನ ಎಷ್ಟು?
- ನಿಮ್ಮ ವಾರ್ಡಿನಲ್ಲಿ ನೀವು ಮಾಡಿದ ಕೆಲಸಗಳೇನು?
- ನಿಮ್ಮ ವಾರ್ಡಿಗೆ ಬಂದ ಮನೆಗಳು ಎಷ್ಟು?
- ಯಾವ ಫಲಾನುಭವಿಗಳಿಗೆ ಮನೆ ಹಾಕಿದ್ದೀರಿ?
- ಫಲಾನುಭವಿಗಳ ಕಡೆಯಿಂದ ಎಷ್ಟು ದುಡ್ಡು ಪಡೆದುಕೊಂಡಿದ್ದೀರಿ?
- ಗ್ರಾಮಕ್ಕಾಗಿ ಯಾವ ಯೋಜನೆಗಳನ್ನು ತಂದಿದ್ದೀರಿ?
- ಗ್ರಾಮದ ಉದ್ದಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು?
- ನೀವು ನಿಮ್ಮ ವಾರ್ಡಿಗೆ ಹೆಚ್ಚುವರಿ ಬಂದ ಹಣದಲ್ಲಿ ಯಾವ ಕಾಮಗಾರಿ ಕೈಗೊಂಡಿದಿರಿ.
- ಈಗ ಗ್ರಾಮದಲ್ಲಿ ಯಾವ ಕಾಮಗಾರಿ ಕೊನೆಗೊಂಡಿದೆ?
- ಕುಡಿಯುವ ನೀರಿನ ಸೌಕರ್ಯ ಇದೆಯೇ?
- ಚರಂಡಿಗಳು ಸುಧಾರಿಸಿದೆಯೇ?
- ನೀವು ತಿರುಗಾಡುವ ರಸ್ತೆ ಅಭಿವೃದ್ಧಿಯಾಗಿದೆಯೇ?
ಹೀಗೆ ಕೇಳಿದ ಪ್ರಶ್ನೆಗೆ ಅವರು ಸರಿಯಾದ ಉತ್ತರ ಕೊಟ್ಟರೆ ಅದರ ದಾಖಲಾತಿ ಪ್ರಕಾರ ಕೆಲಸವನ್ನೂ ಮಾಡಿದ್ದಾರೆಯೇ ಎಂದು ಯೋಚಿಸಿ ಮತ್ತು ಪರಿಶೀಲಿಸಿದ ನಂತರ ಮತದಾನ ಮಾಡಿ.
ನಿಮ್ಮ ಗ್ರಾಮದ ಅಭಿವೃದ್ಧಿ ನಿಮ್ಮ ಬೆರಳ ತುದಿಯಲ್ಲಿ ಯೋಚಿಸಿ ಮತ ಚಲಾಯಿಸಬೇಕು. ಚುನಾವಣೆ ಎಂದರೇ ಯಾರೋ ಬಂದು ನಮ್ಮ ವಾರ್ಡ್‌ಗಳಲ್ಲಿ ನಟಿಸುವವರು. ನಟಿಸುವ ನೃತ್ಯಕ್ಕೆ ಹೆಜ್ಜೆ ಹಾಕಬೇಡಿ. ಒಳ್ಳೆಯ ಕೆಲಸಗಾರರನ್ನು ಆಯ್ಕೆ ಮಾಡಿ ಅಥವಾ ಬೇರೆಯವರಿಗೆ ಅವಕಾಶ ಮಾಡಿಕೊಡಿ. ತಿಂದು ತೇಗಿ ಜನರ ಸಮಸ್ಯೆಯನ್ನು ಗಮನಿಸದ ಗ್ರಾಮದ ರಾಜಕಾರಣಿಗೆ ಮತ ಚಲಾಯಿಸಬೇಡಿ. ಇದು ನಿಮ್ಮ ಕೈಯಲ್ಲಿ ಇದೆ ಉತ್ತಮ ಕೆಲಸಗಾರರನ್ನು ಚುನಾಯಿಸಿ. ಇಲ್ಲವಾದಲ್ಲಿ ಬೇರೆಯವರಿಗೆ ಅವಕಾಶ ನೀಡಿ.
-ಎಚ್. ರವಿಕುಮಾರ್
ಎಎಪಿ ಜಿಲ್ಲಾಧ್ಯಕ್ಷರು,
ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post