ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಇಲ್ಲಿನ ಪ್ರಸಿದ್ದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಪ್ರತಿವರ್ಷದಂತೆ ಜರುಗುವ ಕುರಿಂದು ಉತ್ಸವ #KurinduUtsava ಅದ್ದೂರಿಯಾಗಿ ನಡೆಯಿತು.
ನ.5 ರಾತ್ರಿ ಕುರಿಂದು ಉತ್ಸವ #Darbe ದರ್ಬೆ ವೃತ್ತದಲ್ಲಿ ಅದ್ದೂರಿಯಾಗಿ ಜರುಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ದೇವಾಲಯದಲ್ಲಿ ಕಟ್ಟೆಪೂಜೆ, ಮಹಾಪೂಜೆ ನಡೆಯಿತು. ಆನಂತರ ಅಲಂಕೃತ ದೇವರನ್ನು ದೇವಾಲಯದ ಸನಿಹವಿರುವ ದೇವರ ಕಟ್ಟೆಗೆ ಮೆರವಣಿಗೆಯಲ್ಲಿ ಕರೆತಂದು ಪೂಜಿಸಲಾಯಿತು.
ನಂತರ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ವೈವಿಧ್ಯಮಯ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಿತು.

ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ ನಡೆಯಿತು. ನಂತರ ಅಲ್ಲಿಂದ ಆರಂಭವಾದ ಪೇಟೆ ಸವಾರಿ ಉತ್ಸವ ದರ್ಬೆ ವೃತ್ತದವರೆಗೂ ಸಾಗಿತು.
ಬಳಿಕ ದರ್ಬೆ ವೃತ್ತದಲ್ಲಿ ಶ್ರೀ ದೇವರಿಗೆ ಕುರಿಂದು ಉತ್ಸವ ಜರುಗಿತು. ಮುಂಜಾನೆ 6ಗಂಟೆಗೆ ದೇವಾಲಯಕ್ಕೆ ಶ್ರೀದೇವರ ಆಗಮನವಾಯಿತು.
ಚರ್ತುದಶಿಯಂದು ಮೃಗಬೇಟೆ
ಇನ್ನು, ಕಾರ್ತಿಕ ಹುಣ್ಣಿಯ ಮುನ್ನಾ ದಿನ ಚರ್ತುದರ್ಶಿಯಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ವಿವಿಧ ಉತ್ಸವಗಳು ನಡೆದವು.

ಪ್ರಮುಖವಾಗಿ, ಮೃಗ ಬೇಟೆ ಆಚರಣೆ ಭಕ್ತರ ಗಮನ ಸೆಳೆಯಿತು. ದೇವರ ಬೆಳ್ಳಿ ಬಿಲ್ಲು ಹಾಗೂ ಬಾಣದೊಂದಿಗೆ ಬೇಟೆಗಾರನ ವೇಷ ತೊಟ್ಟವರು ದೇವಾಲಯದ ಆವರಣದಲ್ಲಿ ಹುಲಿ ವೇಷ ಧರಿಸಿದ ಮಕ್ಕಳೊಂದಿಗೆ ದೇವರ ವಸಂತ ಮಂಟಪದ ಮುಂದೆ ಆಗಮಿಸಿದರು.
ವಸಂತ ಮಂಟಪದಲ್ಲಿ ವಿರಾಜಮಾನರಾಗಿದ್ದ ಶ್ರೀದೇವರ ಮುಂಭಾಗದಲ್ಲಿ ಹುಲಿ ವೇಷ ಧರಿಸಿದ್ದ ಮಕ್ಕಳು ಹುಲಿ ಕುಣಿತ ಮಾಡಿದರು. ಇವರನ್ನು ಬೇಟೆಗಾರ ಹುಲಿಯನ್ನು ಬೇಟೆಯಾಡುವ ಸಂಪ್ರದಾಯದಂತೆ ಅಣುಕು ಪ್ರದರ್ಶನ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post