ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಪುತ್ತೂರು ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲದಲ್ಲಿ ಉಂಟಾಗುತ್ತಿರುವ ನೀರು ನಿಲ್ಲುವ ಸಮಸ್ಯೆ, ಹಳ್ಳ-ಮೋರಿಯ ತೊಂದರೆ, ರಸ್ತೆಗಳ ಹಾಳು ಸ್ಥಿತಿ ಮತ್ತು ವಿಳಂಬದ ಕಾಮಗಾರಿಗಳು ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿವೆ. ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಸ್ಪಂದಿಸದಂತಾಗಿರುವ ಸ್ಥಿತಿಯಲ್ಲಿ, ರಾಜ್ಯದ ಸರಕಾರದ ಶಾಸಕರೇ ಕಾರ್ಯರೂಪದಲ್ಲಿ ಇಳಿದು ಕೆಲಸ ಮಾಡಬೇಕಾದ ಅಗತ್ಯ ಉಂಟಾಗಿದೆ.
ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಶಾಸಕ ಅಶೋಕ್ ರೈ ಮಳೆ ನೀರು ಹೋಗಲು ದಾರಿ ಕಲ್ಪಿಸುವ ಕೆಲಸವನ್ನು ಸ್ವತಃ ಕೈಹಿಡಿದು, ಕಾರ್ಮಿಕನಂತೆ ಅವೈಜ್ಞಾನಿಕ ರಸ್ತೆಗಳ ಕಾಮಗಾರಿ ಕಾರ್ಯದ ವಿರುದ್ದ ತಾನೆ ಪಿಕ್ಕಾಸು ಹಿಡಿದು ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರಾಜಕೀಯ ಪ್ರತಿಭಟನೆ ಮಾತ್ರವಲ್ಲ; ಇದು ಸತ್ತಿರುವ ಅಧಿಕಾರ ವ್ಯವಸ್ಥೆಯ ವಿರುದ್ಧ ಪಟ್ಟು ಹಿಡಿದಿರುವ ಹೋರಾಟವಾಗಿದೆ.

ಮಳೆಗಾಲದ ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳು ಏನು ಮಾಡಿದ್ದಾರೆ?
ಜಿಲ್ಲಾಡಳಿತ ಜಿಲ್ಲಾಧಿಕಾರಿ ಏಕೆ ಸುಮ್ಮನಾಗಿದ್ದಾರೆ?
ಜಿಲ್ಲಾಧಿಕಾರಿಗಳು, ಜಿಳ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು , ಜಿಲ್ಲಾಡಳಿತದ ಅಧಿಕಾರಿಗಳು ಯಾವ ಮಟ್ಟಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಜವಾಬ್ದಾರಿಯ ಯುಗದಲ್ಲಿ ನಾವು ಬದುಕುತ್ತಿದ್ದರೆ, ಅಧಿಕಾರಿಗಳಿಂದ ಕಾರ್ಯಕ್ಷಮತೆ ನಿರೀಕ್ಷಿಸುವುದು ಜನರ ಹಕ್ಕು. ಪುತ್ತೂರಿನ ಜನತೆ ಈಗ ಎಚ್ಚರಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕಾರ್ಯನಿರತವಾಗದಿದ್ದರೆ, ಜನತೆಯೇ ರಸ್ತೆಗಿಳಿದು ಅವರನ್ನು ಹೊರಗೆ ಕರೆತರುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ಈಗ ರಾಜ್ಯವ್ಯಾಪಿಯಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post