ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಧರ್ಮಸ್ಥಳದಲ್ಲಿ #Dharmastala ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣಕ್ಕೆ #Soujanya Case ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯೂಟ್ಯೂಬ್ ವಿಡಿಯೋ ವಿರುದ್ದ ವಿಶ್ವಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಧಾರ್ಮಿಕ ಕ್ಷೇತ್ರಗಳ ಅವಹೇಳನ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ವಿಶ್ವಹಿಂದೂ ಪರಿಷತ್ ಮುಖಂಡ ಬಾಸ್ಕರ್ ಮಾತನಾಡಿ, ಧರ್ಮಸ್ಥಳ ಸೌಜನ್ಯ ಕೇಸ್ ಬಗ್ಗೆ ಯ್ಯೂಟ್ಯೂಬರ್ ಸಮೀರ್ ವಿಡಿಯೋ #Sameer YouTube Video ಮಾಡಿದ್ದು, ಅದರಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಸರಕಾರದ ವ್ಯಾಪ್ತಿಗೆ ತರುವ ಬಗ್ಗೆ ಉಲ್ಲೇಖ ಮಾಡಿದ್ದಾನೆ. ಸೌಜನ್ಯ ವಿಚಾರದಲ್ಲಿ ವಿಶ್ವಹಿಂದೂ ಪರಿಷತ್ ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬಂದಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರೇ ಆಗಿನ ಗೃಹಸಚಿವ ಆರ್.ಅಶೋಕ್ ಗೆ ಕರೆಮಾಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇಂದಿಗೂ ವಿಶ್ವಹಿಂದೂ ಪರಿಷತ್ ಸೌಜನ್ಯಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತದೆ, ಧರ್ಮಸ್ಥಳ ಕ್ಷೇತ್ರದಲ್ಲಿ ಸೌಜನ್ಯಳ ಆರೋಪಿಗಳಿದ್ದರೆ ಅವರನ್ನು ಹಿಡಿದು ಕೊಂಡೋಗಿ ಅವರಿಗೆ ಯಾವರೀತಿ ಹಿಂಸೆ ಮಾಡುತ್ತೀರಿ, ಯಾವ ಪೋಲೀಸ್, ನ್ಯಾಯಾಲಯದ ಎದುರು ನಿಲ್ಲಿಸುತ್ತೀರಿ ಅದಕ್ಕೆ ನಮ್ಮ ಬೆಂಬಲವಿದೆ. ಅದು ಬಿಟ್ಟು ಹಿಂದೂ ಕ್ಷೇತ್ರದ ವಿರುದ್ಧ ಮಾತನಾಡಿದಲ್ಲಿ ವಿಶ್ವಹಿಂದೂ ಪರಿಷತ್ ಸುಮ್ಮನೆ ಕೂರುವುದಿಲ್ಲ ಎಂದರು.

ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಎಂ.ಪೂವಪ್ಪ ಮಾತನಾಡಿ ಹಿಂದೂ ದೇವಸ್ಥಾನಗಳ ಬಗ್ಗೆ ಮಾತನಾಡುವ ಅಧಿಕಾರ ಯ್ಯೂಟ್ಯೂಬರ್ ಗೆ ಇಲ್ಲ, ಧಾರ್ಮಿಕ ಕೇಂದ್ರಗಳಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದಲು ವಿಶ್ವಹಿಂದೂ ಪರಿಷತ್ ಇದೆ. ಅಖಿಲ ಭಾರತ ಮಟ್ಟದಿಂದ ವಿ.ಹೆಚ್.ಪಿ ಈ ಕೆಲಸ ಮಾಡುತ್ತಿದೆ. ಅನ್ಯಾಯಕ್ಕೋಳಗಾದ ಯುವತಿಗೆ ನ್ಯಾಯಕ್ಕಾಗಿ ವಿಶ್ವಹಿಂದೂ ಪರಿಷತ್ ಹೋರಾಟ ಮಾಡಿದೆ. ಈಗಲೂ ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ಸಮೀರ್ ಎನ್ನುವ ಯ್ಯೂಟ್ಯೂಬರ್ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ವಿಡಿಯೋ ಮಾಡಿ ಅಧಿಕ ಪ್ರಸಂಗಿತನ ಮಾಡಿದ್ದಾನೆ. ಆತ ತನ್ನ ತಪ್ಪನ್ನು ತಿದ್ದಿಕೊಳ್ಳದೇ ಇದ್ದಲ್ಲಿ ವಿಶ್ವಹಿಂದೂ ಪರಿಷತ್ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post