No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಮೈಸೂರು | ವಿವಿಧೆಡೆ ರಾಯರ ಉತ್ತರ ಆರಾಧನೆ ವಿಜೃಂಭಣೆ ಮೆರವಣಿಗೆ

kalpa News by kalpa News
August 23, 2024
in ಮೈಸೂರು
0
ಮೈಸೂರು | ವಿವಿಧೆಡೆ ರಾಯರ ಉತ್ತರ ಆರಾಧನೆ ವಿಜೃಂಭಣೆ ಮೆರವಣಿಗೆ

ಕೃಷ್ಣಮೂರ್ತಿ ಪುರಂನಲ್ಲಿ ಹಮ್ಮಿಕೊಂಡಿದ್ದ ರಾಯರ ರಥೋತ್ಸವ ಸಂದರ್ಭ ಮಾತೆಯರಿಂದ ಕೋಲಾಟ ನಡೆಯಿತು.

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಗುರುವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಉತ್ತರ ಆರಾಧನೆ ವಿಜೃಂಭಣೆಯಿಂದ ನೆರವೇರಿತು.

ನಗರದ ಕೃಷ್ಣಮೂರ್ತಿ ಪುರಂನ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಬೆಳಗ್ಗೆ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ನೆರವೇರಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಇತ್ಯಾದಿಗಳು ಅನುರಣಿಸಿದವು.

ಮೈಸೂರಿನ ಭಂಡಾರಕೇರಿ ಮಠದ ವೆಂಕಟಾಚಲ ಧಾಮದಲ್ಲಿ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರಿಂದ ರಾಯರಿಗೆ ಮಹಾ ಮಂಗಳಾರತಿ.

ಪ್ರಧಾನ ಅರ್ಚಕರಾದ ಶ್ರೀನಾಥ ಆಚಾರ್ಯ ಮತ್ತು ಶ್ರೀನಿವಾಸ ಆಚಾರ್ಯರ ನೇತೃತ್ವದಲ್ಲಿ ಸಕಲ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಅಲಂಕೃತ ರಥದಲ್ಲಿ ಶ್ರೀ ಪ್ರಹ್ಲಾದ ರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಕೋಲಾಟ, ಭಜನೆ, ವೇದಘೋಷ, ಮಂಗಳವಾದ್ಯ ನಾದದೊಂದಿಗೆ ಮೆರವಣಿಗೆಯನ್ನು ಮಾಡಲಾಯಿತು.

ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ನಂತರ ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ರಾಮಸ್ವಾಮಿ ವೃತ್ತದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಉಡುಪಿ ಭಂಡಾರಿ ಕೇರಿ ಮಠದ ವೆಂಕಟಾಚಲಧಾಮದಲ್ಲಿ ಗುರುವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಎಳ ನೀರು ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿತು. ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ವೃಂದಾವನಕ್ಕೆ ವಿಶೇಷ ಪುಷ್ಪಲಂಕಾರ ಮಾಡಿದ್ದು ಗಮನ ಸೆಳೆಯಿತು.

ಮೈಸೂರಿನ ಕೃಷ್ಣ ಮೂರ್ತಿ ಪುರಂ ರಾಯರ ಕ್ಷೇತ್ರದಲ್ಲಿ ಶ್ರೀ ನಾಥ ಆಚಾರ್ಯರ ನೇತೃತ್ವದಲ್ಲಿ ವೃಂದಾವನ ಕ್ಕೆ ಮಹಾಪೂಜೆ ಸಮರ್ಪಣೆ ಆಯಿತು

ನಂತರ ನೂರಾರು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಆಯಿತು. ಸಂಜೆ ಪಂಡಿತ ಕೃಷ್ಣ ಕುಮಾರ ಆಚಾರ್ಯ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

ನಾವು ಆಧ್ಯಾತ್ಮದ ಕಡೆಗೆ, ದೇವರ ಕಡೆಗೆ ಸಾಗಬೇಕು ಎಂದರೆ ಅದಕ್ಕೆ ಪ್ರಧಾನವಾಗಿ ದಾರಿ ತೋರುವವರೇ ಗುರುಗಳು ಎಂದು ಹೇಳಿದರು.

ಕಲಿಯುಗದಲ್ಲಿ ಸಮಗ್ರವಾಗಿ ದೇವರನ್ನು ತಿಳಿದವರು, ದೇವರ ಅಸ್ತಿತ್ವವನ್ನು ನೋಡಿದವರು, ದೇವರ ಬಗ್ಗೆ ಸಮಗ್ರವಾಗಿ ಅರಿತವರು ಮತ್ತು ನಮ್ಮ ಎಲ್ಲರ ಅಪೇಕ್ಷೆಗಳನ್ನು ಈಡೇರಿಸುವ ಏಕೈಕ ಗುರು ಎಂದರೆ ಶ್ರೀ ರಾಘವೇಂದ್ರ ಸ್ವಾಮಿಗಳು. ನಾವು ಮೊದಲು ಅವರನ್ನು ತಿಳಿಯಬೇಕು. ಈ ನಿಟ್ಟಿನಲ್ಲಿ ಆರಾಧನೆ ಸಂದರ್ಭ ವಿಶೇಷವಾಗಿದೆ ಎಂದರು.

ನಮಗೆ ಸಂಸಾರದ ಅನೇಕ ತೊಂದರೆಗಳು, ಜಂಜಾಟ, ಕಲಹಗಳು, ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ. ಈ ಎಲ್ಲವನ್ನು ಸಮಗ್ರವಾಗಿ ಪರಿಹರಿಸಿ ಬದುಕನ್ನು ವಿಕಸನಗೊಳಿಸುವ ಶಕ್ತಿ ಇರುವ ಏಕೈಕ ಗುರು ಎಂದರೆ ಅದು ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದರು.

ಚಾಮರಾಜ ಜೋಡಿ ರಸ್ತೆಯ ಭಂಡಾರ ಕೇರಿ ಮಠದಲ್ಲಿ ಪಂಡಿತ ಕೃಷ್ಣ ಕುಮಾರ ಆಚಾರ್ಯರಿಂದ ವಿಶೇಷ ಉಪನ್ಯಾಸ

ರಾಘವೇಂದ್ರ ಸ್ವಾಮಿಗಳು ಲೌಕಿಕರನ್ನು, ಪಾಮರರನ್ನು ಪಂಡಿತರನ್ನು, ಧನಿಕರನ್ನು ವಿದ್ಯಾವಂತರನ್ನು, ಜೊತೆಗೆ ಏನೂ ತಿಳಿಯದ ಸಾಮಾನ್ಯ ವ್ಯಕ್ತಿಯನ್ನೂ ಅನುಗ್ರಹ ಮಾಡಿದ್ದಾರೆ. ಅಪೇಕ್ಷೆ ಈಡೇರಿಸಿದ್ದಾರೆ. ಭೌತಿಕ ಮತ್ತು ಪಾರಮಾರ್ಥಿಕ ಸಮಸ್ಯೆಗಳಿಗೆ ರಾಯರ ಗ್ರಂಥಗಳು ಸಮರ್ಥವಾದ ಉತ್ತರವನ್ನು ನೀಡಿವೆ. ರಾಯರು ಎಂದೂ ಅಯೋಗ್ಯವಾದದನ್ನು ತಿಳಿಸಿಲ್ಲ. ವಿಚಾರ ಮಾಡದೇ ಯಾವುದೇ ಸಂಗತಿಯನ್ನು ಒಪ್ಪಿಲ್ಲ. ಒಣ ಚರ್ಚೆಗಳನ್ನು ಮಾಡಿಯೇ ಇಲ್ಲ. ಒಮ್ಮೆ ಹೇಳಿದ್ದನ್ನು ಮತ್ತೆ ಅವರ ಬದುಕಿನಲ್ಲಿ ಎಂದೂ ಉಪದೇಶ ಮಾಡಿಲ್ಲ. ಒಮ್ಮೆ ಬರೆದ ಗ್ರಂಥವನ್ನು ಮತ್ತೆ ಎದೂ ತಿದ್ದುಪಡಿ ಮಾಡಿಲ್ಲ. ನಮ್ಮ ನಡೆ, ನುಡಿ ಮತ್ತು ಸಮಗ್ರ ಬದುಕು ಹೇಗೆ ಸ್ವಚ್ಛವಾಗಿರಬೇಕು ಎಂಬುದನ್ನು ತಿಳಿಯಬೇಕಾದರೆ ನಾವು ರಾಯರನ್ನು ಪ್ರತಿ ಕ್ಷಣವೂ ನಂಬಬೇಕು ಎಂದು ಕೃಷ್ಣಕುಮಾರ ಆಚಾರ್ಯ ಹೇಳಿದರು.

ನಂತರ ಶ್ರೀಮಠದಲ್ಲಿ ರಾಯರ ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವೆ ಮತ್ತು ರಂಗ ಪೂಜೆಗಳು ನೆರವೇರಿತು.

ಜಯಲಕ್ಷ್ಮಿಪುರಂನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ರಾಯರ ಉತ್ತರಾರಾಧನೆ ಭಕ್ತಿ ಭಾವದಿಂದ ನೆರವೇರಿದ್ದು ವಿಶೇಷವಾಗಿತ್ತು.

ಪ್ರಧಾನ ಅರ್ಚಕ ಆದ್ಯ ಗೋವಿಂದಾಚಾರ್ಯ ಮತ್ತು ಪ್ರದೀಪ ಆಚಾರ್ಯ ಅವರ ನೇತೃತ್ವದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಮಾಡಲಾಯಿತು.

ಮೈಸೂರಿನ ಉತ್ತರಾದಿ ಮಠದ ನಿರ್ವಹಣೆಯ ಶ್ರೀ ದೇವೇಂದ್ರ ತೀರ್ಥರ ಪ್ರತಿಷ್ಠಾಪಿತ ರಾಯರ ಸನ್ನಿಧಿಗೆ ಪಂಡಿತ ವ್ಯಾಸತೀರ್ಥ ಆಚಾರ್ಯರಿಂದ ಮಹಾಪೂಜೆ ನೆರವೇರಿತು.
https://kalpa.news/wp-content/uploads/2024/04/VID-20240426-WA0008.mp4

ಸಂಜೆ ಪ್ರಖ್ಯಾತ ಪ್ರಖ್ಯಾತ ಕಲಾವಿದ ಶಿವಕುಮಾರ ಸ್ವಾಮ ಮತ್ತು ತಂಡದಿಂದ ವಿಶೇಷ ತಾಳವಾದ್ಯ ಕಚೇರಿ ಭಕ್ತರನ್ನು ರಂಜಿಸಿತು.

ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ದೇವೇಂದ್ರ ತೀರ್ಥರಿಂದ ಪ್ರತಿಷ್ಠಾಪಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಬೃಂದಾವನಕೆ ವಿಶೇಷ ಪೂಜಾರಿಗಳು ಭಕ್ತಿ ಭಾವದಿಂದ ನೆರವೇರಿದವು ಬೃಂದಾವನಕ್ಕೆ ನಡೆಸಿದ ಕ್ಷೀರಾ ಭಿಷೇಕ ಗಮನ ಸೆಳೆಯಿತು. ಪ್ರಧಾನ ಅರ್ಚಕ ಮತ್ತು ಗಾಯಕ ಪಂಡಿತ ವ್ಯಾಸ ತೀರ್ಥ ಆಚಾರ್ಯರಿಂದ ಆರಾಧನಾ ಮಹೋತ್ಸವ ಮತ್ತು ತಾರತಮ್ಯೋಕ್ತ ಸಂಗೀತ ಸೇವೆಗಳು ನೆರವೇರಿದ್ದು ವಿಶೇಷವಾಗಿತ್ತು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನದಾನ ಮಾಡಿದ್ದು ವಿಶೇಷವಾಗಿತ್ತು. ಬೆಳಗಿನ ಅವಧಿಯಿಂದಲೇ ರಾಯರ ಬೃಂದಾವನಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಪೂಜೆ ಸಂಪನ್ನಗೊಂಡಿತು.

ರಾಯರ ಕೃತಿಗಳ ಬಗ್ಗೆ ಪ್ರವಚನ ವ್ಯಾಖ್ಯಾನ ರಾಯರ ಬಗ್ಗೆ ರಚಿಸಿದ ಅಷ್ಟೋತ್ತರ ಸ್ತುತಿಗಳ ಪಾರಾಯಣ ನೆರವೇರಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      
Kalahamsa Infotech private limited

Tags: Kannada News WebsiteLatest News KannadamysoreRaghavendra SwamyRayara Aradhaneಮೈಸೂರುಶ್ರೀ ರಾಘವೇಂದ್ರ ಗುರುಸಾರ್ವಭೌಮರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಇದು ಯಾವುದೋ ದೇಶ, ರಾಜ್ಯದ್ದಲ್ಲ | ಶಿವಮೊಗ್ಗದ ಸರ್ಜಿ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ | ಏನಿದು?

Next Post

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

kalpa News

kalpa News

Next Post
ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL