ಹಾವೇರಿ: ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರೆ ಆಧುನಿಕ ಭಾರತದ ರೂವಾರಿ ರಾಹುಲ್ ಗಾಂಧಿ ಅವರು ಉಗ್ರರಿಗೆ ಬಲಿಯಾದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತಿನ ಭರದಲ್ಲಿ ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಹಾವೇರಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರವನ್ನು ಆರಂಭಿಸಲು ನಡೆಸಲಾದ ಜನಪರಿವರ್ತನ ಸಮಾವೇಶದಲ್ಲಿಮ ಮಾತನಾಡುವ ಭರದಲ್ಲಿ ಖಂಡ್ರೆ ಈ ರೀತಿ ಹೇಳಿದ್ದು, ಕಾಂಗ್ರೆಸ್’ಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಇನ್ನೊಂದು ವಿಚಾರವೇನೆಂದರೆ ಈಶ್ವರ ಖಂಡ್ರೆ ಮಾತನಾಡುವ ವೇಳೆ ಸ್ವತಃ ರಾಹುಲ್’ಗಾಂಧಿ ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದುದು, ರಾಹುಲ್ ಸ್ವತಃ ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ತಮ್ಮ ಮಾತಿನ ಭರದಲ್ಲಿ ಆದ ಪ್ರಮಾದವನ್ನು ಅರಿತುಕೊಳ್ಳುವ ವೇಳೆಗೆ ಖಂಡ್ರೆ ಅವರ ವಾಕ್ ಚಾತುರ್ಯ ಮತ್ತು ಅವರ ಪಕ್ಷ ನಾಯಕತ್ವ ತೀವ್ರ ಇರಿಸುಮುರಿಸಿಗೆ ಗುರಿಯಾಯಿತು.
ಆನಂತರ ತಮ್ಮ ಮಾತಿನಲ್ಲಿ ಆದ ಪ್ರಮಾದವನ್ನು ಅರಿತು, ಭಾಷಣ ಮುಂದುವರೆಸಿದರು.
Discussion about this post