ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಕ್ಲಾಸ್’ನಲ್ಲಿ ಪಾಠ ಕೇಳುವಾಗಲೇ ಲೋ ಬಿಪಿಯಿಂದಾಗಿ 14 ವರ್ಷದ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆದ ಜಿಲ್ಲೆಯ ಸಿರವಾರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ತರುಣ್ ಅತ್ತನೂರು(14) ಎಂದು ಗುರುತಿಸಲಾಗಿದೆ.
Also read: ಮತೀಯವಾದಿಗಳ ಒತ್ತಡಕ್ಕೆ ಪ್ರಶಸ್ತಿಗೆ ತಡೆ | ವಿರೋಧಿಸಿದವರ ಮೇಲೆ ಕೇಸ್ | MLC ಡಾ. ಸರ್ಜಿ ಖಂಡನೆ
ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ಕಲಿಯುತ್ತಿದ್ದ ತರುಣ್ ಎಂದಿನಂತೆ ಶಾಲೆಗೆ ಆಗಮಿಸಿದ್ದಾನೆ. ಆದರೆ, ಪಾಠ ಕೇಳುವಾಗ ಏಕಾಏಕಿ ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಈತನನ್ನು ಶಿಕ್ಷಕರು ಹಾಗೂ ಸಿಬ್ಬಂದಿಗಳು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ಕಾರಣಕ್ಕಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಾರ್ಗ ಮಧ್ಯೆ ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟಿz್ದÁನೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post