ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ಮಧ್ಯ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೆ ವಲಯಗಳು ಎರಡು ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಕಾಯಂ ಆಗಿ ಜೋಡಿಸಲು ನಿರ್ಧರಿಸಿವೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಆಸನ ಹಾಗೂ ಮಲಗುವ ಸೌಲಭ್ಯ ಲಭ್ಯವಾಗಲಿದೆ.
ಸಿಕಂದರಾಬಾದ್–ವಾಸ್ಕೋ ಡ ಗಾಮಾ ರೈಲಿಗೆ AC 3-ಟೈರ್ ಬೋಗಿ
ದಕ್ಷಿಣ ಮಧ್ಯ ರೈಲ್ವೆಯು ರೈಲು ಸಂಖ್ಯೆ 17039/17040 ಸಿಕಂದರಾಬಾದ್–ವಾಸ್ಕೋ ಡ ಗಾಮಾ–ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳಿಗೆ ಒಂದು ಹೆಚ್ಚುವರಿ AC 3-ಟೈರ್ ಬೋಗಿಯನ್ನು ಕಾಯಂ ಆಗಿ ಸೇರಿಸಲು ನಿರ್ಧರಿಸಿದೆ. ಈ ಸೇರ್ಪಡೆಯಿಂದ ರೈಲಿನ ಒಟ್ಟು LHB ಬೋಗಿಗಳ ಸಂಖ್ಯೆ 19ರಿಂದ 20ಕ್ಕೆ ಏರಿಕೆಯಾಗಲಿದೆ.
ಈ ಬದಲಾವಣೆ ರೈಲು ಸಂಖ್ಯೆ 17039 ಸಿಕಂದರಾಬಾದ್–ವಾಸ್ಕೋ ಡ ಗಾಮಾ ಎಕ್ಸ್ಪ್ರೆಸ್ಗೆ ಸೆಪ್ಟೆಂಬರ್ 2, 2026ರಿಂದ ಹಾಗೂ ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ–ಸಿಕಂದರಾಬಾದ್ ಎಕ್ಸ್ಪ್ರೆಸ್ಗೆ ಸೆಪ್ಟೆಂಬರ್ 3, 2026ರಿಂದ ಜಾರಿಗೆ ಬರಲಿದೆ.
ಪರಿಷ್ಕೃತ ಬೋಗಿಗಳ ಸಂಯೋಜನೆ
ಕಾಯಂ ಹೆಚ್ಚುವರಿ ಬೋಗಿ ಸೇರ್ಪಡೆಯ ಬಳಿಕ ರೈಲಿನಲ್ಲಿ:
- 02 AC 2-Tier ಬೋಗಿಗಳು
- 06 AC 3-Tier ಬೋಗಿಗಳು
- 06 Sleeper Class ಬೋಗಿಗಳು
- 04 ಕಾಯ್ದಿರಿಸದ ದ್ವಿತೀಯ ದರ್ಜೆ (General) ಬೋಗಿಗಳು
- 01 ದಿವ್ಯಾಂಗ ಸ್ನೇಹಿ ಸೌಲಭ್ಯ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಮತ್ತು ಬ್ರೇಕ್ ವ್ಯಾನ್
- 01 Generator-cum-Luggage/Brake Van ಒಳಗೊಂಡಿರಲಿದೆ.
ಪ್ರಯಾಗ್ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ ರೈಲಿಗೂ ಹೆಚ್ಚುವರಿ ಸ್ಲೀಪರ್ ಕೋಚ್
ಇದೇ ವೇಳೆ ಉತ್ತರ ಮಧ್ಯ ರೈಲ್ವೆಯು ರೈಲು ಸಂಖ್ಯೆ 04113/04114 ಪ್ರಯಾಗ್ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗ್ರಾಜ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಯನ್ನು ಕಾಯಂ ಆಗಿ ಜೋಡಿಸಲು ನಿರ್ಧರಿಸಿದೆ. ಇದರಿಂದ ರೈಲಿನ ಒಟ್ಟು ICF ಬೋಗಿಗಳ ಸಂಖ್ಯೆ 22ರಿಂದ 23ಕ್ಕೆ ಏರಿಕೆಯಾಗಲಿದೆ.
Also read>> Railway Board Hubballi–Rameswaram Special Express Services Extended
ರೈಲು ಸಂಖ್ಯೆ 04113 ಪ್ರಯಾಗ್ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ಗೆ ಸೆಪ್ಟೆಂಬರ್ 5, 2026ರಿಂದ ಹಾಗೂ ರೈಲು ಸಂಖ್ಯೆ 04114 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗ್ರಾಜ್ ವಿಶೇಷ ಎಕ್ಸ್ಪ್ರೆಸ್ಗೆ ಸೆಪ್ಟೆಂಬರ್ 8, 2026ರಿಂದ ಹೆಚ್ಚುವರಿ ಬೋಗಿ ಸೇರ್ಪಡೆ ಜಾರಿಗೆ ಬರಲಿದೆ.
ಪರಿಷ್ಕೃತ ಸಂಯೋಜನೆ
ಹೆಚ್ಚುವರಿ ಸ್ಲೀಪರ್ ಬೋಗಿ ಸೇರ್ಪಡೆಯಾದ ಬಳಿಕ ರೈಲಿನಲ್ಲಿ:
- 03 AC 3-Tier ಬೋಗಿಗಳು
- 10 Sleeper Class ಬೋಗಿಗಳು
- 08 ಕಾಯ್ದಿರಿಸದ ದ್ವಿತೀಯ ದರ್ಜೆ (General) ಬೋಗಿಗಳು
- 02 ದಿವ್ಯಾಂಗ ಸ್ನೇಹಿ ಸೌಲಭ್ಯ ಹೊಂದಿರುವ ದ್ವಿತೀಯ ದರ್ಜೆ ಸಿಟ್ಟಿಂಗ್, ಲಗೇಜ್ ಮತ್ತು ಬ್ರೇಕ್ ವ್ಯಾನ್ಗಳು ಒಳಗೊಂಡಿರಲಿವೆ.
ಈ ಎರಡೂ ರೈಲುಗಳಿಗೆ ಕಾಯಂ ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಆಸನ ಹಾಗೂ ಮಲಗುವ ಸೌಲಭ್ಯ ದೊರೆಯಲಿದ್ದು, ರೈಲು ಪ್ರಯಾಣದ ಬೇಡಿಕೆಯನ್ನು ಪೂರೈಸಲು ಸಹಕಾರಿಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









