ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆಯಲ್ಲಿ ಇಂದು ಸಂಜೆ ಭಾರೀ ಗಾಳಿ ಹಾಗೂ ಮಳೆ ಅವಾಂತರ ಸೃಷ್ಠಿಸಿದ್ದು, ಪರಿಣಾಮವಾಗಿ ಹಲವು ಮನೆ ಹಾಗೂ ಮಸೀದಿಗೆ ಹಾನಿಯಾಗಿದೆ.

ಗ್ರಾಮದ ಮಸೀದಿ ಮಳಿಗೆಗೆ ಹಾಕಲಾಗಿದ್ದ ಸುಮಾರು 50 ಅಡಿ ಅಗಲದ ಶೀಟ್ ಕಬ್ಬಿಣದ ಹ್ಯಾಂಗಲರ್ ಸಮೇತ ಹಾರಿ ಹೋಗಿ ಮೂರು ಮನೆಗಳ ಮೇಲೆ ಬಿದ್ದಿದೆ. ಪರಿಣಾಮವಾಗಿ ಮನೆಗಳು ಜಖಂ ಗೊಂಡಿದ್ದು ಲಕ್ಷಾಂತರ ರೂಪಾಯಿಗಳ ಮೌಲ್ಯದ ಹಾನಿಯಾಗಿದೆ.
ಇನ್ನು ಈ ಘಟನೆಯಿಂದ ಅಲ್ತಾಫ್ ಉನ್ನಿಸಾ ಎಂಬ ಮಹಿಳೆಯ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ.
Get in Touch With Us info@kalpa.news Whatsapp: 9481252093















