ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೃಷಿ ವಿಚಕ್ಷಣಾ ದಳ ಹಾಗೂ ಜಿಲ್ಲಾ ಕೃಷಿ ನಿರ್ದೇಶಕರ ತಂಡ ರಾಜ್ಯದ ವಿವಿದೆಡೆ ಮಿಂಚಿನ ಜಂಟಿ ಕಾರ್ಯಾಚರಣೆ ನಡೆಸಿದ್ದು ಹಲವೆಡೆ ಅಕ್ರಮ ಮೆಕ್ಕೆಜೋಳ ದಾಸ್ತಾನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದೆ.
ಎ.21 ರಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಲಿಂಗನಾಯಕನಹಳ್ಳಿಯಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ 31 ಕ್ವಿಂಟಲ್ ಹಾಗೂ ಹಿರೇಕೆರೂರು ತಾಲೂಕಿನ ಶಿರಗುಂಟಿ ಗ್ರಾಮದಲ್ಲಿ 4.5 ಲಕ್ಷದ 35 ಕ್ವಿಂಟಲ್ ಮೆಕ್ಕೆಜೋಳ ಬಿಡಿ ಬೀಜ ದಾಸ್ತಾನು ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ, ಶಿಡ್ಲುಗಟ್ಟ, ಗೂಡಿಬಂಡೆ, ಬಾಗೇಪಲ್ಲಿ ತಾಲೂಕುಗಳಿಗೆ ರಾಜ್ಯದ ಕೃಷಿ ಇಲಾಖೆಯ ವಿಜುಲೇನ್ಸ್ ತಂಡ ಹಾಗೂ ಜಿಲ್ಲೆಯ ಕೃಷಿ ಅಧಿಕಾರಿಗಳು ಏಕಕಾಲಕ್ಕೆ ಕೃಷಿ ಪರಿಕಾರಗಳ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡದಂತೆ ನೋಟೀಸ್ ನೀಡಲಾಗಿದೆ.
ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕಿನ ಸೃಷ್ಟಿ ಆಗ್ರೋ ಕೇಂದ್ರ ಮಾರಾಟ ಪರವಾನಗಿಗಳ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನೋಟೀಸ್ ನೀಡಲಾಗಿದೆ.
ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ವಿನಾಯಕ ಕೃಷಿ ಕೇಂದ್ರದಲ್ಲಿ ಅವಧಿ ಮುಗಿದ ಕೀಟನಾಶಗಳು, ಬೀಜಗಳನ್ನು ಇಟ್ಟಿದರಿಂದ ಅಂಗಡಿಯನ್ನು ಜಪ್ತಿ ಮಾಡಲಾಗಿದೆ. ರಾಣೆಬೆನ್ನೂರಿನ ಹರ್ಷಿತ ಹೈಬ್ರೀಡ್ ಸಿಡ್ಸ್ ಇವರಲ್ಲಿ ಅಗತ್ಯ ದಾಖಲೆ ಇಲ್ಲದ ಕಾರಣ ಅಂಗಡಿಯನ್ನ ಜಪ್ತಿ ಮಾಡಲಾಗಿದೆ. ಉಳಿದ ನಾಲ್ಕು ಕೃಷಿಪರಿಕರ ಮಾರಾಟಗಾರರಿಗೆ ಅಗತ್ಯ ದಾಖಲೆ ಇಲ್ಲದ ಕಾರಣ ನೋಟೀಸ್ ನೀಡಲಾಗಿದ್ದು ವರದಿಯನ್ನು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post