ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ರವಿಶಂಕರ ಗುರೂಜಿ Shri Ravishankar Guruji ಅವರ 70ನೇ ಜನ್ಮೋತ್ಸವ ವರ್ಷಾಚರಣೆ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ಸಂಭ್ರಮಾಚರಣೆ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಮೇ 5ರಿಂದ 10ರವರೆಗೆ `ಆನಂದೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಆಶ್ರಮದ ಸಾಧ್ವಿ ಶುಭಕರಿ ಜೀ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 18 ವರ್ಷ ಮೇಲ್ಪಟ್ಟವರಿಗಾಗಿ ಸರಳ ಯೋಗಾಭ್ಯಾಸ, ಪ್ರಾಣಾಯಾಮ, ಉಸಿರಾಟ ಪ್ರಕ್ರಿಯೆ, ಧ್ಯಾನ ಮತ್ತು ಸುದರ್ಶನ ಕ್ರಿಯೆಯನ್ನು ಒಳಗೊಂಡಿರುವ ಹ್ಯಾಪಿನೆಸ್ ಕಾರ್ಯಕ್ರಮ-ಜೀವನ ಕಲೆ ಸುದರ್ಶನ ಕ್ರಿಯೆ ಶಿಬಿರವನ್ನು ನಗರದ ವಿವಿಧ ಭಾಗಗಳಲ್ಲಿ ಆರು ದಿನಗಳ ಕಾಲ ನಡೆಸಲಾಗುತ್ತಿದೆ ಎಂದರು.
ಮೊದಲ ಉಸಿರಿನಿಂದ ಜೀವನ ಆರಂಭವಾಗುತ್ತದೆ. ಕೊನೆಯ ಉಸಿರಿನೊಂದಿಗೆ ಅದು ಮುಗಿಯುತ್ತದೆ. ಈ ಎರಡು ಕ್ಷಣಗಳ ನಡುವಿನ ಉಸಿರಾಟವೇ ಬದುಕು ಎಂಬ ಸಂದೇಶದೊಂದಿಗೆ ಸುದರ್ಶನ ಕ್ರಿಯೆ ಯೋಗವು ವ್ಯಕ್ತಿಯ ಜೀವನದಲ್ಲಿ ಆಳವಾದ ಪರಿವರ್ತನೆ ತರುತ್ತದೆ ಎಂದರು.
ಈ ಶಿಬಿರವು ಕೇವಲ ಶ್ವಾಸಾಭ್ಯಾಸವಲ್ಲ. ಅದು ವ್ಯಕ್ತಿಯ ಜೀವನದಲ್ಲಿ ಹೊಸ ದಿಕ್ಕು ನೀಡುವ ಆಂತರಿಕ ಪರಿವರ್ತನೆಯ ಒಂದು ಮಹತ್ವದ ಸಾಧನೆಯಾಗಿದೆ. ಒತ್ತಡಗಳಿಂದ ಮುಕ್ತಿ, ಬದುಕುವ ಯುಕ್ತಿ, ಜೀವನಕ್ಕೊಂದು ಹೊಸ ಆಯಾಮ, ಚಿಂತನೆಗಳಿಗೆ ವಿರಾಮ ಎಂಬ ಸಂದೇಶದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮತೋಲನವನ್ನು ಅನುಭವಿಸಬೇಕೆಂದರು.
ಮೇ 5ರಿಂದ 10ರವರೆಗೆ ನಡೆಯುವ ಶಿಬಿರವು ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಪ್ರತಿದಿನ ಮೂರು ಬ್ಯಾಚ್‍ಗಳಲ್ಲಿ ನಡೆಯಲಿದ್ದು, ಬೆಳಿಗ್ಗೆ 6 ರಿಂದ 8ರವರೆಗೆ ನವುಲೆಯ ನವನಗರದ ಜ್ಞಾನಕ್ಷೇತ್ರದಲ್ಲಿ, ಜೆ.ಹೆಚ್.ಪಟೇಲ್ ಬಡಾವಣೆಯ, ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, ಶ್ರೀ ರಂಗನಾಥ ಬಡಾವಣೆಯ ಶ್ರೀ ಅಯ್ಯಪ್ಪಸ್ವಾಮಿ ಸಭಾಭವನದಲ್ಲಿ, ಸ್ವಾಮಿವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಶ್ಲೇಷ ಭವನದಲ್ಲಿ ಹಾಗೂ ಸಂಜೆ 6 ರಿಂದ 8ರವರೆಗೆ ನವುಲೆಯ ನವನಗರದ ಜ್ಞಾನಕ್ಷೇತ್ರದಲ್ಲಿ, ಜೆ.ಹೆಚ್.ಪಟೇಲ್ ಬಡಾವಣೆಯ, ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, ಶ್ರೀ ರಂಗನಾಥ ಬಡಾವಣೆಯ ಶ್ರೀ ಅಯ್ಯಪ್ಪಸ್ವಾಮಿ ಸಭಾಭವನದಲ್ಲಿ, ಹಾಗೂ ಕೃಷಿನಗರದ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಲಿದ್ದು, ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಮಲ್ಲೇಶ್ವರ ನಗರದ ರಾಮ್‍ರಾವ್ ಲೇಔಟ್‍ನಲ್ಲಿರುವ ಯೋಗಾಚಾರ್ಯ ಶ್ರೀ ರುದ್ರಾರಾಧ್ಯ ಯೋಗಭವನದಲ್ಲಿ ವಿಶೇಷ ಬ್ಯಾಚ್ ನಡೆಯಲಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಹೆಚ್.ಡಿ.ಚಂದ್ರಹಾಸ, ಮೊ: 9448250026, ಅಥವಾ ಶಬರೀಶ್ ಕಣ್ಣನ್ ಮೊ: 9964072793ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಡಿ.ಚಂದ್ರಹಾಸ, ಶಬರೀಶ್ ಕಣ್ಣನ್, ಕೃಷ್ಣಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















