ಮುಂಬೈ: ಮುಂಬೈನ ಪ್ರಖ್ಯಾತ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ, ವಿಚಾರಣೆ ನಡೆಸಿದೆ.
ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಅವರನ್ನು ವಿಚಾರಣೆ ನಡೆಸಲಾಗಿದೆ. ಪ್ರತಿದಿನ ಒಂದು ಕೋಟಿಗೂ ಅಧಿಕ ವ್ಯವಹಾರ ನಡೆಯುತ್ತಿರುವ ಕುರಿತಾಗಿ ಆದಾಯ ತೆರಿಗೆ ಇಲಾಖೆ ಹಲವರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ಜಾರಿಯಾದ ಎಲ್ಲರ ಹೆಸರುಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಿಬಿಐ ರವಾನಿಸಿತ್ತು.
ಕುಂದ್ರಾ ಅವರನ್ನು ಯಾವ ಆಯಾಮದಲ್ಲಿ ವಿಚಾರಣೆ ನಡೆಸಲಾಗಿದೆ ಎಂಬು ಮಾಹಿತಿ ಸ್ಪಷ್ಟವಿಲ್ಲವಾಗಿ ತಿಳಿದುಬಂದಿಲ್ಲ. ಐಪಿಎಲ್ ಅಕ್ರಮ ಸೇರಿದಂತೆ ಹಲವು ಅಕ್ರಮ ಪ್ರಕರಣಗಳಲ್ಲಿ ಕುಂದ್ರಾ ಹೆಸರು ಕೇಳಿಬಂದಿರುವುದು ಹೊಸತೇನಲ್ಲ.
Discussion about this post