ಕಲ್ಪ ಮೀಡಿಯಾ ಹೌಸ್ | ರಾಜಗೀರ್(ನಳಂದಾ) |
5ನೇ ಶತಮಾನದಿಂದಲೂ ವಿಶ್ವದ ಅತ್ಯಂತ ಶ್ರೇಷ್ಠ ವಿದ್ಯಾ ಕ್ಷೇತ್ರ ಎಂದು ಖ್ಯಾತವಾಗಿದ್ದ ನಳಂದ ವಿಶ್ವವಿದ್ಯಾಯಲಕ್ಕೆ #Nalanda University ಮರುಜೀವ ನೀಡುವ ಸಂಕಲ್ಪ ತೊಟ್ಟು ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರ್ಕಾರ ಇಂದು ಮಹತ್ವದ ಹೆಜ್ಜೆಯಿಟ್ಟಿದ್ದು ಈ ಪುಣ್ಯಕ್ಷೇತ್ರದ ನೂತನ ಕ್ಯಾಂಪಸನ್ಸು ಲೋಕಾರ್ಪಣೆಗೊಳಿಸಿದೆ.
ಬಿಹಾರದ ರಾಜಗೀರ್’ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸನ್ನು ಪ್ರಧಾನಿ ನರೇಂದ್ರ ಮೋದಿ #PM Narendra Modi ಇಂದು ಉದ್ಘಾಟಿಸಿದ್ದು, ಈ ಮೂಲಕ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

Also read: ಅಂಧಾಭಿಮಾನಿಗಳಿಂದ ಜೀವ ಬೆದರಿಕೆ | ದೂರು ದಾಖಲಿಸಿದ ನಟ ಪ್ರಥಮ್
ಪುರಾತನ ನಳಂದದ ಅವಶೇಷಗಳು ಸನ್ಯಾಸಿಗಳ ಮತ್ತು ಪಾಂಡಿತ್ಯಪೂರ್ಣ ಸಂಸ್ಥೆಯ ಪುರಾತತ್ವ ಅವಶೇಷಗಳನ್ನು ಒಳಗೊಂಡಿವೆ. ಇಲ್ಲಿ ಸ್ತೂಪಗಳು, ದೇವಾಲಯಗಳು, ವಿಹಾರಗಳು (ವಸತಿ ಮತ್ತು ಶೈಕ್ಷಣಿಕ ಕಟ್ಟಡಗಳು) ಮತ್ತು ಗಾರೆ, ಕಲ್ಲು ಮತ್ತು ಲೋಹದ ಪ್ರಮುಖ ಕಲಾಕೃತಿಗಳು ಕಂಡುಬರುತ್ತವೆ. ನಳಂದವು ಭಾರತೀಯ ಉಪಖಂಡದ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯವಾಗಿ ಎದ್ದು ಕಾಣುತ್ತದೆ.

ಐದನೇ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ನಳಂದಾ ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಬಂದಿದೆ.
ತಜ್ಞರ ಪ್ರಕಾರ, 12 ನೇ ಶತಮಾನದಲ್ಲಿ ಆಕ್ರಮಣಕಾರರಿಂದ ನಾಶವಾಗುವ ಮೊದಲು ಇದು 800 ವರ್ಷಗಳ ಕಾಲ ಪ್ರವರ್ಧಮಾನಕ್ಕೆ ಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post