ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೂರಾರು ವರ್ಷಗಳ ಕೋಟ್ಯಂತರ ಹಿಂದೂಗಳ ಕನಸು ಇಂದು ನನಸಾಗಿದ್ದು, ಈ ಮೂಲಕ ಗುಲಾಮಗಿರಿ ಸಂಕೇತ ಇಂದು ಹೋಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅಯೋಧ್ಯೆಯನ್ನು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ನಗರದ ಕೋಟೆ ಶ್ರೀಸೀತಾರಾಮಾಂಜನೇಯ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಮ, ಹವನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಉದ್ಬವಿಸಿದ್ದ ಸಮಸ್ಯೆ ಸಮಸ್ತ ಹಿಂದೂಗಳಿಗೆ ಒಂದು ರೀತಿಯ ಗುಲಾಮಗಿರಿ ಸಂಕೇತವಾಗಿತ್ತು. ಆದರೆ, ಇಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿಯವರು ಶಿಲಾನ್ಯಾಸ ನೆರವೇರಿಸುವ ಮೂಲಕ ಗುಲಾಮಗಿರಿಯು ಹೋಗಿದೆ ಎಂದರು.
ಇದೇ ರೀತಿಯಲ್ಲಿ ಕಾಶಿ ವಿಶ್ವನಾಥ ಹಾಗೂ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಳದಲ್ಲೂ ಸಹ ಇಂತಹುದ್ದೇ ಪರಿಸ್ಥಿತಿಯಿದೆ. ಅಲ್ಲಿನ ದೇವಾಲಯದಲ್ಲಿ ನೆಮ್ಮದಿಯಿಂದ ಪೂಜೆ ಮಾಡಲು ಅಡ್ಡಿಯಿದ್ದು, ಅಲ್ಲಿಯೂ ಸಹ ನಾವು ಗುಲಾಮರು ಎನ್ನುವಂತೆ ಇತರೆ ಧರ್ಮಗಳು ಪರಿಗಣಿಸುತ್ತಿವೆ. ಇಲ್ಲೂ ಸಹ ಬದಲಾವಣೆಯಾಗಬೇಕಿದ್ದು, ಭವ್ಯವಾದ ಮಂದಿರಗಳು ನಿರ್ಮಾಣವಾಗಬೇಕಿದೆ ಎಂದರು.
Get In Touch With Us info@kalpa.news Whatsapp: 9481252093
Discussion about this post